ಬೆಂಗಳೂರು:ಏ.04: ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಬಿಡುಗಡೆ ಮಾಡಲಿದ್ದಾರೆ. ಅಂದ್ರೆ ಹಾಲಿ ಶಾಸಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಎಂದು ಸ್ವತಃ ಬಿಜೆಪಿ ನಾಯಕರು ಹೇಳಿಕೊಂಡು ಬರ್ತಿದ್ದಾರೆ. ಇದ್ರ ನಡುವೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಿದೆ. ಇದು ಕಾಂಗ್ರೆಸ್ ಮಾಡಿರುವ ಫೇಕ್ ಸುದ್ದಿ ಎಂದು ಬಿಜೆಪಿ ಆರೋಪಿಸಿದೆ. ಇದ್ರಿಂದ ಕಾಂಗ್ರೆಸ್ಗೆ ಏನು ಲಾಭ ಅಂತಾ ನಿಮ್ಮಲ್ಲಿ ಪ್ರಶ್ನೆ ಬರಬಹುದು ಆದರೆ ಲಾಭ ಇದೆ, ಏನಪ್ಪ ಅಂದ್ರೆ ಟಿಕೆಟ್ ಹಂಚಿಕೆ ಮಾಡೋಕೆ ಕಷ್ಟ ಪಡ್ತಿರೋ ಬಿಜೆಪಿ ಅಭ್ಯರ್ಥಿಗಳ ನಡುವೆ ಬೆಂಕಿ ಹೊತ್ತಿಕೊಳ್ಳುತ್ತೆ. ಮೂರು ಕಾರಣಗಳನ್ನು ನೋಡಬಹುದು, ಬಿಜೆಪಿ ನಾಯಕರು ಟಿಕೆಟ್ಗಾಗಿ ಹೋರಾಟ ಶುರು ಮಾಡಬಹುದು,
ಟಿಕೆಟ್ ಸಿಗಲ್ಲ ಅನ್ನೋದು ಗೊತ್ತಾದ್ರೆ ಬಿಜೆಪಿಯಿಂದ ಕಾಲ್ಕಿತ್ತು ಕಾಂಗ್ರಸ್ ಕಡೆಗೆ ಬರಬಹುದು. ಬಿಜೆಪಿ ಟಿಕೆಟ್ ಗೊಂದಲದ ಇದೇ ಅನ್ನೋದನ್ನು ಸಾರ್ವಜನಿಕವಾಗಿ ಮನವರಿಕೆ ಮಾಡಿ, ಈ ಮೂಲಕ ಲಾಭ ಪಡೆಯಬಹುದು. ಆದರೆ ಇದಕ್ಕೆ ಕಾಂಗ್ರೆಸ್ ಹೇಳ್ತಿರೋದೇ ಬೇರೆ.

ಗುಜರಾತ್ ಮಾದರಿಯಲ್ಲಿ ಟಿಕೆಟ್ ಬಿಡುಗಡೆ ಅಂತಾ ಸ್ವತಃ ಬಿಜೆಪಿ ಹೇಳಿಕೊಂಡಿತ್ತು. ಅದರಂತೆ ತಾನೇ ಗುಜರಾತ್ ಮಾದರಿ ಅನುಸರಿಸಿ ಕ್ಷೇತ್ರ ಬದಲಾವಣೆ ಮಾಡೋದು,
ತಾನೇ ಮೊದಲ ಲಿಸ್ಟ್ ರಿಲೀಸ್ ಮಾಡೋದು, ಆ ಬಳಿಕ ಆಕಾಂಕ್ಷಿಗಳು ಹಾಗು ಬೆಂಬಲಿಗರ ಪ್ರತಿಭಟನೆ ತಾಳಲಾರದೇ, ತಾನೇ ಅದನ್ನು ಫೇಕ್ ಅಂತ ಹೇಳೋದು.
ಅಭ್ಯರ್ಥಿಗಳ ಮೊದಲ ಪಟ್ಟಿ ಹಿಂಪಡೆದು ಸಂತೋಷ ಪಡುತ್ತಿರೋದು ಯಾರು? ಎಂದು ಪ್ರಶ್ನೆ ಮಾಡಿದೆ. ಈ ಮೂಲಕ ಬಿ.ಎಲ್ ಸಂತೋಷ್ ಲಿಸ್ಟ್ ವಾಪಸ್ ಪಡೆದಿದ್ದಾರೆ ಅನ್ನೋ ರೀತಿ ಪರೋಕ್ಷವಾಗಿ ಹೇಳಿದೆ. ಬಿ.ಎಲ್.ಸಂತೋಷ್ ಟಿಕೆಟ್ ಲಿಸ್ಟ್ ವಾಪಸ್ ಪಡೆದಿದ್ದು ಯಾಕೆ ಅಂದ್ರೆ, ಶಿವಮೊಗ್ಗದ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರೆ ಹೆಸರು ಬಂದಿದ್ದಕ್ಕಾ? ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಬಗ್ಗೆ ಸಿಎಂ ಕೂಡ ಮಾತನಾಡಿದ್ದಾರೆ. ಕಳೆದ 2-3 ದಿನಗಳಿಂದ ಬಿಜೆಪಿಯಲ್ಲಿ ಕಸರತ್ತು ನಡೆಯುತ್ತಿದೆ. 2 ದಿನದ ಸಭೆ ಮಾಡಿದ ಬಳಿಕ ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಈ ಮೀಟಿಂಗ್ನಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಿ ಕೇಂದ್ರಕ್ಕೆ ಕಳಿಸ್ತೇವೆ. ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಪಟ್ಟಿ ಸೇರಿದ ಬಳಿಕ ಅಲ್ಲಿಂದ ಟಿಕೆಟ್ ಬಿಡುಗಡೆ ಆಗುತ್ತೆ. ದೆಹಲಿಯಿಂದ ಅಧಿಕೃತ ಪಟ್ಟಿ ಹೊರಬೀಳಲಿದೆ ಎಂದು ಸಿಎಂ ಹೇಳಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆ ಆಗಿದೆ. ಇಂದು, ನಾಳೆ ರಾಜ್ಯದಲ್ಲಿ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏಪ್ರಿಲ್ 8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಟಿಕೆಟ್ ಗೊಂದಲ ಯಾಕೆ ಅನ್ನೋ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಸಹಜವಾಗಿಯೇ ಕಾಡುತ್ತಿದೆ. ಇದಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಅಂದ್ರೆ ಹೊಸ ಮುಖಗಳಿಗೆ ಅವಕಾಶ ಕೊಡಬೇಕು, ಒಂದು ವೇಳೆ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ರೆ ಪಕ್ಷಾಂತರ ಭೀತಿ ಇದೆ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದೆ ಬೇರೆ ಪಕ್ಷಗಳಿಗೆ ವಲಸೆ ಹೋದ್ರೆ ಕಾಂಗ್ರೆಸ್ ಗೆಲ್ಲಲಿದೆ. ಇನ್ನು ಹಲವು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಹಾಗು ಇತ್ತೀಚಿಗೆ ಸರ್ಕಾರ ರಚನೆಗೆ ವಲಸೆ ಬಂದವರು ಪಟ್ಟು ಹಿಡಿದಿದ್ದಾರೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಅದೇ ರೀತಿ ಯಡಿಯೂರಪ್ಪ ಕೂಡ ಕೆಲವೊಂದಿಷ್ಟು ಬೆಂಬಲಿಗರಿಗೆ ಟಿಕೆಟ್ ಕೊಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದ್ರ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ಬಾರಿ ಟಿಕೆಟ್ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದ್ರೆ ಬ್ರಾಹ್ಮಣರೇ ಮುಖ್ಯಮಂತ್ರಿ ಅಂತಾ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ರು. ಆ ಮಾತಿಗೆ ಸಾಕ್ಷ್ಯ ಎನ್ನುವಂತೆ ಪ್ರಹ್ಲಾದ್ ಜೋಶಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಬಿ.ಎಸ್.ಯಡಿಯೂರಪ್ಪಗೆ ಮಾನ್ಯತೆ ಸಿಗುತ್ತಾ ಅಥವಾ ಪ್ರಹ್ಲಾದ್ ಜೋಶಿ, ಬಿ.ಎಲ್ ಸಂತೋಷ್ಗೆ ಹೆಚ್ಚಿನ ಮಾನ್ಯತೆ ಸಿಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.