ಸೌಜನ್ಯ ಪ್ರಕರಣ ಸಂಬಂಧ ಆ.27 ರಂದು ಬಿಜೆಪಿ ಯಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಹೋರಾಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಪ್ರಮುಖರು ಭಾಗಿಯಾಗಲಿದ್ದಾರೆಂದು ತಿಳಿಸಿದ್ದಾರೆ. ಎಸ್ ಡಿ ಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಪೊಲೀಸ್ ತನಿಖೆ ಆಗಿದೆ.
ಸಿಐಡಿ ಬಳಿಕ ಹೋರಾಟ ನಡೆದು ಸಿಬಿಐ ತನಿಖೆ ಕೂಡ ಆಗಿದೆ. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಆರೋಪಿ ಅಲ್ಲ ಅಂತ ಹೇಳಿದೆ. ಆವತ್ತು ಕೂಡ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಮಾಡಿತ್ತು. ಇದೀಗ ಮತ್ತೆ ಬಿಜೆಪಿ ಇಡೀ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತದೆ ಎಂದಿದ್ದಾರೆ
ಅಲ್ಲದೇ ಘಟನೆಯ ಬಳಿಕದ ಹೋರಾಟಗಳು, ಕುಟುಂಬದ ಆಗ್ರಹಗಳ ತನಿಖೆ ಆಗಬೇಕು. ಹಂತಕರ ಪತ್ತೆ ಮೂಲಕ ಕುಟುಂಬಕ್ಕೆ ನ್ಯಾಯ ಸಿಗಬೇಕು.ಬಿಜೆಪಿ ಪ್ರಕರಣದ ಮರು ತನಿಖೆಗೆ ಸಿಎಂಗೆ ಒತ್ತಾಯ ಮಾಡಲಿದ್ದು, ಆ.27ರಂದು ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಆ ಬಳಿಕ ಸಿಎಂ ಮತ್ತು ರಾಜ್ಯಪಾಲರಿಗೆ ಮನವಿ ಕೊಡಲಿದ್ದೇವೆ.
ಆ.27 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಕಾರ್ಯಕರ್ತರನ್ನು ಸೇರಿಸಿ ಬೃಹತ್ ಹೋರಾಟ ನಡೆಸುತ್ತೇವೆ. ಇದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಬೃಹತ್ ಹೋರಾಟ ನಡೆಯಲಿದೆ.ಎರಡೂ ಜಿಲ್ಲೆಗಳ ಶಾಸಕರು, ನಾಯಕರು ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ