ಬೆಂಗಳೂರು : ಕೆಲವು ದಿನಗಳ ಹಿಂದೆಯಷ್ಟೇ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಸರ್ಕಾರದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪೇ ಸಿಎಂ ಅಭಿಯಾನ ರಾಜ್ಯಾದ್ಯಂತ ನಡೆಸಿತ್ತು.ಇದಾದ ಬಳಿಕ ಕಿವಿ ಮೇಲೆ ಹೂವ ಅಭಿಯಾನ ಕೂಡ ನಡೆಸಿತ್ತು. ಇದರಿಂದ ರಾಜ್ಯದಲ್ಲಿ ಅಂದಿನ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು .

ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇ ಅಸ್ತ್ರವನ್ನು ಉಪಯೋಗಿಸೋಕೆ ಬಿಜೆಪಿ ಮುಂದಾಗಿದೆ. ಚುನಾವಣೆಗೂ ಮುನ್ನ ನಿಂಗೂ ಫ್ರೀ, ನಂಗೂ ಫ್ರೀ ಎನ್ನುತ್ತಾ ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಗ್ಗೆ ತಿಳಿಸಿದ್ದ ಕಾಂಗ್ರೆಸ್ ವಿರುದ್ದ ಸಮರ ಸಾರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ರಾಜ್ಯದಲ್ಲಿ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ವೇಳೆಯಲ್ಲಿ ಯಾವುದೇ ಕಂಡಿಷನ್ನಗಳನ್ನು ಹಾಕಿದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಹಾ ಪೋಸ್ಟರ್ ಅಭಿಯಾನ ಮಾಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ. ನಾಳೆ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ನಿರ್ಧರಿಸಿದ ಬಳಿಕ ಬಿಜೆಪಿ ಸರ್ಕಾರ ಮಹಾ ಅಭಿಯಾನ ನಡೆಸುವ ಬಗ್ಗೆ ಯೋಚಿಸಲಿದೆ.