ಕೊಪ್ಪಳ:ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಮುಚ್ಚಿಕೊಂಡು ಸುಮ್ಮನೆ ಇರಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಬಿಜೆಪಿಯವರು ಮುಚ್ಚಿಕೊಂಡು ಸುಮ್ಮನೆ ಇರಬೇಕು, ಇಲ್ಲದಿದ್ದರೆ ಜನ ಕ್ಯಾಕರಿಸಿ ಉಗುಳುತ್ತಾರೆ ಅನ್ನೋದು ಶಿವರಾಜ್ ತಂಗಡಗಿ ಮಾತಿನ ಅರ್ಥ.
ಚುನಾವಣೆಯ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿಗಾಗಿ ಉಳಿಸುತ್ತೇವೆ ಎಂದಿದ್ದರು. ಆಗ ಯತ್ನಾಳ್ ಏನು ಬಾಯಲ್ಲಿ ಉಂಡಿ ಇಟ್ಟುಕೊಂಡಿದ್ದರಾ..? ಎಂದು ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದ್ದಾರೆ. ಕಾರಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಂಗಡಗಿ ಹೀಗೆ ಹೇಳಿದ್ದಾರೆ.
2020ರಲ್ಲಿ ಬಿಜೆಪಿ ಸರಕಾರವಿದ್ದಾಗ ಕನಕಗಿರಿ ಕ್ಷೇತ್ರದಲ್ಲಿ ವಕ್ಫ್ನಿಂದ ನೋಟಿಸ್ ನೀಡಿದ್ದರು. 2019ರಲ್ಲಿಯೂ ನೋಟಿಸ್ ನೀಡಿದ್ದರು. ಇವರ ರಾಜಕೀಯಕ್ಕಾಗಿ ಯಾತ್ರೆ ಮಾಡ್ತಾರೆ. ಇವರು ಬಂದಾಗ ಜನ ಕ್ಯಾಕರಿಸಿ ಉಗುಳಿ ಕೇಳ್ತಾರೆ ಅಂತಾನೂ ತಿಳಿಸಿದ್ದಾರೆ.