ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಿನ್ನೆ ತುಂಬಾನೇ ಸೀರಿಯಸ್ ಆಗಿತ್ತು, ಕಿಚ್ಚ ಅವರು ಒಂದು ವಿಚಾರದ ಬಗ್ಗೆ ಗರಂ ಆಗಿದ್ರು, ಬಿಗ್ ಬಾಸ್ ಮನೆಯಿಂದ ಟ್ರೀಟ್ಮೆಂಟ್ ಗೋಸ್ಕರ ಹೊರ ಹೋಗಿದ್ದ ಚೈತ್ರ ಕುಂದಾಪುರ ಮತ್ತೆ ಬಿಗ್ ಬಾಸ್ ಮನೆಗೆ ಬಂದು.ಹೊರಗಡೆ ಜನ ಏನು ಮಾತನಾಡುತ್ತಿದ್ದಾರೆ ನಿಮ್ಮ ಬಗೆಗಿನ ಅಭಿಪ್ರಾಯ ಏನಿದೆ ಎಂಬುದನ್ನು ಕಂಟೆಸ್ಟೆಂಟ್ಸ್ ಮುಂದೆ ಹೇಳ್ತಾರೆ. ಇದು ನಿನ್ನೆ ಎಪಿಸೋಡ್ ನ ಮುಖ್ಯ ಚರ್ಚೆಯಾಗಿತ್ತು. ಚೈತ್ರ ಕುಂದಾಪುರ ಹೇಳೋದೇನೆಂದರೆ ಅಲ್ಲಿದ್ದ ಡಾಕ್ಟರ್ ಬಳಿ ನಾನು ಬಿಗ್ ಬಾಸ್ ಮನೆಯಲ್ಲಿ ಕಂಟೆಸ್ಟೆಂಟ್ ಯಾವ ರೀತಿ ಆಟವಾಡುತ್ತಿದ್ದಾರೆ, ಎಂಬುದನ್ನು ಕೇಳಿದಾಗ ಅವರು ನನಗೆ ಈ ಮಾಹಿತಿಯನ್ನ ಕೊಟ್ರು ನಾನು ಅದನ್ನ ಬಿಗ್ ಬಾಸ್ ಮನೆಯೊಳಗಡೆ ಹೇಳ್ದೆ ಅಂತ..

ಈ ವಿಚಾರವನ್ನು ಕೇಳುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಚೈತ್ರ ಮೇಲೆ ಸಕ್ಕತ್ ಕೋಪ ಮಾಡ್ಕೊಂಡ್ರು ಹಾಗೂ ಕಿಚ್ಚ ಅವರ ಮಾತಿಗೂ ಚೈತ್ರ ಅವರು ಪ್ರತ್ಯುತ್ತರವನ್ನ ಕೊಡುತ್ತಾನೆ ನಾನು ತಪ್ಪು ಮಾಡಿಲ್ಲ ನಾನು ಮಾಡಿದ್ದೆ ಸರಿ ಅನ್ನುವ ರೀತಿಯಲ್ಲಿ ಚೈತ್ರ ಮಾತನಾಡಿದರು. ನಂತರ ಕಿಚ್ಚ ಅವರು ಬಿಗ್ ಬಾಸ್ ಕ್ಯಾಮೆರಾ ಬಳಿ ಬಂದು ನಾನಿನ್ನು ಈ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರೋದಿಲ್ಲ ಮನೆಗೆ ಹೋಗ್ತೀನಿ ಬಿಗ್ ಬಾಸ್ ಎಂದು ಕಣ್ಣೀರನ್ನು ಹಾಕಿದ್ರು. ಹೊತ್ತಿನಲ್ಲಿ ಚೈತ್ರ ಕುಂದಾಪುರ ಗೆ ಕಿಚ್ಚ ನಿನ್ನೆ ಚಳಿಯನ್ನ ಬಿಡಿಸಿದ್ದಂತೂ ಹೌದು.
ಇದಕ್ಕೂ ಮುನ್ನ ಈ ವಾರದ ಕಿಚ್ಚನ ಚಪ್ಪಾಳೆ ಗೋಲ್ಡ್ ಸುರೇಶ್ ಅವರಿಗೆ ಸಿಕ್ಕಿದೆ, ಕಳೆದ ಬಾರಿ ಗೋಲ್ಡ್ ಸುರೇಶ್ ಕಳಪೆಯಲ್ಲಿದ್ರು.ಆದ್ರೆ ಈ ಬಾರಿ ಅವರ ಪರ್ಫಾರ್ಮೆನ್ಸ್ ಮತ್ತು ಅವರ ವರ್ತನೆ ಎಲ್ಲವೂ ಕೂಡ ಕಿಚ್ಚನಿಗೆ ಇಷ್ಟವಾಗಿ ಚಪ್ಪಾಳೆ ಕೊಟ್ರು.

ಇದಾದ ಬಳಿಕ ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ದ ಒಂದು ವಿಚಾರದ ಬಗ್ಗೆ ಕಿಚ್ಚ ಮಾತನಾಡಿದರು, ಕಳೆದ ವಾರವೂ ಕೂಡ ಧನರಾಜ್ ಅವರನ್ನು ಕಳಪೆಗೆ ಕಳುಹಿಸಿದರು, ಈ ವಾರವು ಕೂಡ ಧನರಾಜ್ ಕಳಪೆಗೆ ಹೋದರು, ಕಳಪೆಗೆ ಕಳಿಸುವಾಗ ಹೇಳುವ ಕಾರಣದ ಬಗ್ಗೆ ನಿಮಗೂ ಅರಿವಿರಲಿ ಸುಮ್ಮನೆ ಹೇಳಬೇಕಲ್ಲ ಎಂಬ ಕಾರಣಕ್ಕೆ ಏನೇನು ಹೇಳಬೇಡಿ ಎಂದು ಕಿಚ್ಚ ಅವರು ಭವ್ಯನಿಗೆ ಕ್ಲಾಸ್ ತೆಗೆದುಕೊಂಡ್ರು, ಒಬ್ಬರಿಗೆ ಮಾತನಾಡಲು ಅವಕಾಶ ಕೊಡಿ ಮಧ್ಯ ಮಾತನಾಡಬೇಡಿ ಎಂದು ಮೋಕ್ಷಿತಾಗೆ. ಕಿಚ್ಚ ತಿಳಿಹೇಳಿದ್ರು, ಹೀಗೆ ಮಾಡುವುದರಿಂದ ಒಬ್ಬ ಹೀರೋನ ನೀವೇ ಹುಟ್ಟು ಹಾಕುತ್ತಿದ್ದೀರಾ, ಹೊರಗಡೆ ಸಿಂಪತಿ ವರ್ಕ್ ಆಗುತ್ತೆ ಎಂಬ ಮಾತುಗಳನ್ನು ಕೂಡ ಹೇಳಿದ್ರೂ.

ಇದೆಲ್ಲಾ ಆದ ಬಳಿಕ ಈ ವಾರ ಯಾರಪ್ಪ ಎಲಿಮಿನೇಟ್ ಆಗ್ತಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಟ್ಟು 10 ಜನ ನಾಮಿನೇಟ್ ಆಗಿದ್ದಾರೆ, ಅವರ ಪೈಕಿ ಗೋಲ್ಡ್ ಸುರೇಶ್, ಧನರಾಜ್ ಹಾಗು ಮೋಕ್ಷಿತ ಅವರನ್ನು ನಿನ್ನೆ ಕಿಚ್ಚ ಸೇಫ್ ಮಾಡಿದ್ರು ಹಾಗೂ ಇನ್ನೂ ಉಳಿದ ಏಳು ಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಎಂಬ ಕುತೂಹಲ ಮೂಡಿರೋದು ಸಹಜ.
ಇದರ ಮಧ್ಯೆ ಕಿಚ್ಚ ಒಂದು ಟ್ವಿಸ್ಟ್ ನೀಡಿದರು. ಅದೇನಪ್ಪ ಅಂದ್ರೆ. ಈ ವಾರ ಜೋಡಿ ಟಾಸ್ಕ್ ಇತ್ತು ಹಾಗಾಗಿ ಯಾರು ಅಲ್ಲ ಯಾರ್ಯಾರು ಎಲಿಮಿನೇಟ್ ಆಗ್ತಾರೆ ನೋಡೋಣ ಎಂಬುದನ್ನ ಕೂಡ ಹೇಳ್ತಾರೆ. ಇದು ಕಂಟೆಸ್ಟೆಂಟ್ ಗಳಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಕೂಡ ಹುಳ ಬಿಟ್ಟಂತಾಗಿದೆ.