ಕಲಬುರಗಿ (Kalaburgi) ಜಿಲ್ಲೆಯ ಬಿಜೆಪಿ ಅಡ್ಜಸ್ಟ್‌ಮೆಂಟ್ ಗಿರಾಕಿಗಳು ರಾತ್ರಿ ಬೆಂಗಳೂರಿನ ಖರ್ಗೆ (Kharge) ಮನೆಲಿ ಇರ್ತಾರೆ. ಬೆಳಿಗ್ಗೆ ಬಂದು ಬೋಲೋ ಭಾರತ್ ಮಾತಾಕೀ ಜೈ ಅಂತಾರೇ ಅಂತ ಕಲಬುರಗಿ ಬಿಜೆಪಿ ಮುಖಂಡರು/ಶಾಸಕರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda patil yatnal) ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಾನಾಡಿದ ಶಾಸಕ ಯತ್ನಾಳ್,ಖರ್ಗೆ ಸಾಹೇಬ್ ಆಯೇತೆ, ಮಿಲ್ಕೆ ಆಯೇ ಅಂತಾರೆ, ಹೀಗಾಗಿ ನಮ್ ಮಧ್ಯೆನೆ ಒಗ್ಗಟ್ಟಿಲ್ಲ ಎಂದು ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ.
ಇನ್ನು ಹುಬ್ಬಳ್ಳಿ ಗಲಭೆ ಆರೋಪಿಗಳ ರಿಲೀಸ್ ಬಗ್ಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನೇ ಅಮಾಯಕರೆಂದು ಬಿಡುಗಡೆ ಮಾಡಿದೆ ಈ ಸರ್ಕಾರ, ಇದರ ವಿರುದ್ಧ ಬಿಜೆಪಿಯ ಯಾರೋಬ್ಬರು ಹೋರಾಟ ಮಾಡ್ಲಿಲ್ಲ ಎಂದು ಪ್ರಶ್ನಿಸಿದ್ದಾರೆ.











