ಶಿವಮೊಗ್ಗ: ಬಿಜೆಪಿ ವಿಷಕಾರಿ ಸರ್ಪ, ಕಾರ್ಯಕರ್ತರನ್ನೇ ಕಚ್ಚುತ್ತೆ, ಮಾಡಾಳ್ ವಿರೂಪಾಕ್ಷಪ್ಪ ಕೋಟ್ಯಂತರ ರೂಪಾಯಿ ಹಣ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದರೂ ಮೂರೇ ದಿನದಲ್ಲಿ ಬೇಲ್ ಸಿಗುತ್ತೆ ಆದರೆ ಸಾಮಾನ್ಯ ಜನರಿಗೆ ಕನಿಷ್ಟ ಆರು ತಿಂಗಳು ಜೈಲು ಹಾಕ್ತಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲಿದೆ. ಕರ್ನಾಟಕ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ನೇರವಾಗಿ ಸರ್ಕಾರದ ವಿರುದ್ಧ ಆರೋಪ ಮಾಡಿದರು. 40% ಕಮಿಷನ್ ಇಲ್ಲದೆ ಈ ಸರ್ಕಾರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದರು. ಈ ಘಟನೆ ನಡೆದು ಆರು ತಿಂಗಳು ಕಳೆದಿವೆ. ಆರು ಬಾರಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಿದ್ದಾರೆ. ಈ ವಿಷಯಗಳ ಬಗ್ಗೆ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಥವಾ ಯಾವುದೇ ಬಿಜೆಪಿ ಮುಖಂಡರು ಬೆಳಗಾವಿ ಕಾಂಟ್ರಾಕ್ಟರ್ ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿಲ್ಲ. ಒಂದು ವೇಳೆ ಅವರ ಪತ್ನಿ ಜೊತೆ ಮಾತನಾಡಿದ್ದರೆ ಕಮಿಷನ್ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ಬಂದು ಟಾಟಾ ಬಾಯ್ ಬಾಯ್ ಹೇಳಿ ಹೋದರು. ಆದರೆ ಬಿಜೆಪಿ ಮುಖಂಡ ಪಾಟೀಲ್ ಮನೆಗೆ ಬರಲೇ ಇಲ್ಲ. ಆದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹಾಗೂ ನಾನು ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದೇವೆ. ಪಾಟೀಲ್ ಪತ್ನಿ ನಮಗೆ ಹೇಳಿದ್ದು ಇಷ್ಟೇ, ಸಂತೋಷ್ ಪಾಟೀಲ್ ತನ್ನ ಜೀವನವನ್ನು ಬಿಜೆಪಿಗೆ ಮುಡುಪಾಗಿಟ್ಟರು ಕೂಡ ಯಾರು ಈ ತನಕ ಸಾಂತ್ವನ ಹೇಳಲು ಬಂದಿಲ್ಲ. ಹಾಗೂ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾದರು.

ಬಿಜೆಪಿ ವಿಷಕಾರಿ ಸರ್ಪ ತಮ್ಮ ಕುಟುಂಬದವರೇ ಬಿಡುವುದಿಲ್ಲ. ಬಿಜೆಪಿ ಕಾರ್ಯಕರ್ತರನ್ನೇ ಬಿಟ್ಟಿಲ್ಲ. ಅದು ಸಂತೋಷ ಪಾಟೀಲ್ ಪ್ರಕರಣದಲ್ಲೂ ಕೂಡ ಸಾಬೀತಾಗಿದೆ. 40% ಕಮಿಷನ್ ಬಗ್ಗೆ ಗೊತ್ತಾಗಬೇಕು ಅಂದ್ರೆ ತುಮಕೂರಿನ ಟಿ ಎನ್ ಪ್ರಸಾದ್ ಅವರ ಮನೆಗೆ ಹೋದರೆ ಸಾಕು. ಕಾಂಟ್ರಾಕ್ಟ್ ಹಣ ನೀಡದೇ ಪ್ರಸಾದ್ ಸಾವಿಗೂ ಕೂಡ ಬಿಜೆಪಿ ಸರ್ಕಾರ ಕಾರಣವಾಗಿದೆ. ಬಸವರಾಜ್ ಬೊಮ್ಮಾಯಿ ನರೇಂದ್ರ ಮೋದಿ ಪ್ರಸಾದ್ ಮನೆಗೆ ಭೇಟಿ ಕೊಡದೆ ಇರಬಹುದು ಆದರೆ ಕಾಂಗ್ರೆಸ್ ಮುಖಂಡರಾದ ನಾವು ಅವರ ಮನೆಗೆ ಭೇಟಿ ನೀಡಿ ಮಾತನಾಡಿಸಿಕೊಂಡು ಬಂದಿದ್ದೇವೆ. ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರಕ್ಕೆ ಎಷ್ಟು ಹಣದ ಅವಶ್ಯಕತೆ ಇದೆ ಅಷ್ಟನ್ನ ಕಾಂಗ್ರೆಸ್ ಸರ್ಕಾರ ಸಂಗ್ರಹಿಸಿ ಕೊಡಲಿದೆ. ಆಗಲಾದರೂ ದನದಹಿ ಮನಸ್ಥಿತಿ ಕಡಿಮೆಯಾಗಬಹುದು. ಗದಗದ ದಿಂಗಾಲೇಶ್ವರ ಸ್ವಾಮೀಜಿ ಕೂಡ ಕಮಿಷನ್ ಬಗ್ಗೆ ಆರೋಪ ಮಾಡಿದರು. ಈತನಕ ಈ ವಿಷಯದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿಲ್ಲ. ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಕಚೇರಿಯಲ್ಲೇ ಲಂಚ ಪಡೆದ ಪ್ರಕರಣ ಇಡೀ ರಾಜ್ಯದ ಜನರು ನೋಡಿದ್ದಾರೆ. ಅದೇ ದಿನ ಅವರ ಮನೆಯಲ್ಲಿ ಸಾಕಷ್ಟು ಅಕ್ರಮ ಆಸ್ತಿ ಹಣ ದೊರಕಿತು. ಶಾಸಕ ಓಡೋದ ಮೂರು ದಿನಗಳಲ್ಲಿ ಆತನಿಗೆ ಬೇಲ್ ಕೂಡ ಸಿಕ್ಕಿತು. ನೀವು-ನಾವು ಸಣ್ಣ ತಪ್ಪು ಮಾಡಿದರೂ ಆರು ತಿಂಗಳು ಜೈಲಿಗೆ ಹಾಕುತ್ತಾರೆ. ಜರ್ನಲಿಸ್ಟ್ ಗಳನ್ನೂ ಜೈಲಿಗೆ ಹಾಕುತ್ತಾರೆ ಎಂದು ಸುರ್ಜೇವಾಲ ಹೇಳಿದರು.
			
                                
                                
                                