ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ . ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮುಸ್ಲಿಮರು (muslim) ಬಿಜೆಪಿ (BJP)ಪ್ರಚಾರ ಸಭೆಯಲ್ಲಿ ಭಾಗಿಯಾದ್ರೆ ಅಂತವರನ್ನು ಬಹಿಷ್ಕರಿಸಿ ಎಂದು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಯ ಪ್ರಚಾರ ಸಭೆಯಲ್ಲಿ ಮುಸಲ್ಮಾನರು ಭಾಗಿಯಾದರೆ, ಮುಸಲ್ಮಾನ್ ಸಮುದಾಯ ಅಂತಹ ಮುಸ್ಲಿಮರನ್ನ ಬಹಿಷ್ಕರಿಸಬೇಕು . ಅವರನ್ನು ಸಮುದಾಯದಿಂದ ದೂರ ಇಡಬೇಕು ಎಂಬ ಅರ್ಥದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಭಾಷಣ ವಿವಾದಕ್ಕೆ ಕಾರಣವಾಗಿದೆ.
ಇನ್ನು ಭಾಷಣದ ಸಂದರ್ಭದಲ್ಲಿ ಅಭ್ಯರ್ಥಿಯ (Candidate) ಹೆಸರು ಕೇಳಿದ ಮಲ್ಲಿಕಾರ್ಜುನ ಖರ್ಗೆ , ಶಿವಕುಮಾರ್ (Shivakumar) ಎಂದೊಡನೆ ರಾಮನ (Rama) ವಿರುದ್ಧ ಹೋರಾಡಬಲ್ಲರು ಎಂಬ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ರಾಮನ ವಿರುದ್ಧ ಹೋರಾಡಲು ಶಿವ ಸಮರ್ಥ, ನನ್ನ ಹೆಸರು ಮಲ್ಲಿಕಾರ್ಜುನ .ಇದು ಕೂಡ ಶಿವನ ಹೆಸರು ಹೀಗಾಗಿ ರಾಮನ ವಿರುದ್ಧ ಹೋರಾಡಲು ನೀವು ಸಮರ್ಥರಿದ್ದೀರಿ ಎಂಬ ಅರ್ಥದಲ್ಲಿ ಹೇಳಿರುವುದು ವಿವಾದಕ್ಕೆ ಈಡಾಗಿದೆ.

ಒಟ್ನಲ್ಲಿ ಚುನಾವಣಾ ಸಂದರ್ಭದಲ್ಲಿ ಪ್ರಚಾರದ ಭಾಷಣಗಳಿಗೆ ವೇದಿಕೆ ಮೇಲೆ ನಿಲ್ಲುವ ನಾಯಕರು ಮಾತಿನ ಬರದಲ್ಲಿ ಇಂಥ ಹೇಳಿಕೆಗಳನ್ನ ನೀಡ್ತಾರೋ ಅಥವಾ ಉದ್ದೇಶಪೂರ್ವಕವಾಗಿಯೇ ಇಂಥ ಹೇಳಿಕೆಗಳು ನಾಯಕರಿಂದ ಹೊರಬರುತ್ತವೋ ದೇವರೇ ಬಲ್ಲ.