ಬೆಂಗಳೂರು : ನಾನು 1985ರಲ್ಲಿ ದೇವೇಗೌಡರ ವಿರುದ್ಧ ಹೋರಾಡಿದವನು, ಕುಮಾರಸ್ವಾಮಿ ವಿರುದ್ಧವೂ ಹೋರಾಡಿದ್ದೆ.ನನ್ನ ಜೀವನವೇ ಒಂದು ಹೋರಾಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯನ್ನಾಗಿ ಆರ್.ಅಶೋಕ್ಗೆ ಟಿಕೆಟ್ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಡಿಕೆಶಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕಾರಣ ಅಂದರೆ ಅದೇನು ಫುಟ್ಬಾಲ್ ಆಟವಲ್ಲ. ಅದು ಚದುರಂಗವಿದ್ದಂತೆ. ಬಿಜೆಪಿಯವರು ಚದುರಂಗದ ದಾಳವನ್ನು ಉರುಳಿಸಿದೆ. ಅವರಿಗೆ ಶುಭವಾಗಲಿ. ರಾಜಕಾರಣದಲ್ಲಿ ಇಂತಹ ಹೋರಾಟ ಇರಬೇಕು ಎಂದಿದ್ದಾರೆ.
ಪದ್ಮನಾಭನಗರದಲ್ಲಿ ಆರ್.ಅಶೋಕ್ ಬಗ್ಗೆ ಮತದಾರರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಬಾರಿ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಡಿಕೆಶಿ ಹೇಳಿದ್ರು.