
ಬೆಂಗಳೂರಿನಲ್ಲಿ (Bengaluru) ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಪ್ರತಿಕ್ರಿಯಿಸಿದ್ದು,ನಿನ್ನೆ ಆಗಿರುವ ಘಟನೆ ಆಗಬಾರದಿತ್ತು. ಈ ಬಗ್ಗೆ ಸಿಎಂ, ಡಿಸಿಎಂ, ಗೃಹ ಸಚಿವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. 17 ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಪ್ರಿಯಾಂಕ್ ಹೇಳಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ನಾವು ಪ್ರಿಪರೇಶನ್ ಇನ್ನೂ ಚೆನ್ನಾಗಿ ಮಾಡಬೇಕಿತ್ತು.ಈ ದುರಂತದಲ್ಲಿ ಹನ್ನೊಂದು ಜನ ಬಲಿಯಾಗಿದ್ದಾರೆ. ಅವರ ಕುಟುಂಬದ ಜೊತೆ ನಾವಿದ್ದೇವೆ. ನಮಗೆ ಸಮಯಾವಕಾಶ ಕಡಿಮೆಯಿತ್ತು. ಈ ಘಟನೆಯ ಹೊಣೆಗಾರಿಕೆಯನ್ನು ನಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ನಾವು ಕೇಂದ್ರ ಸರ್ಕಾರದ ಥರ ಜವಾಬ್ದಾರಿಯಿಂದ ಜಾರಿಕೊಳ್ತಿಲ್ಲ. ಯಾವ ರೀತಿ ನಡೆಸಿಕೊಂಡು ಹೊಗಬೇಕೋ ನೋಡ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರ ಮಾತಿಗೆ ಬೆಲೆ ಹೆಚ್ಚು ಕೊಡಬೇಕಿಲ್ಲ. ಅವರು ಓಪನ್ ಬಸ್‌ನಲ್ಲಿ ಪರೇಡ್ ಮಾಡಬೇಕಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಆದ್ರೆ ಆಮೇಲೆ ಡಿಲೀಟ್ ಯಾಕೆ ಮಾಡಿದ್ರು? ಅವರಿಗೆ ರಾಜಕೀಯ ಮಾಡೋದು ಗೊತ್ತಿದೆ. ನಾವು ಜವಾಬ್ದಾರಿ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.












