2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnatakaassemblyelection) ದಿನಗಣನೆ ಶುರುವಾಗಿದೆ. ಇದೇ ಮೇ 10 ರಂದು ಎಲೆಕ್ಷನ್(election) ನಡೆಯಲಿದ್ದು, ರಾಜಕೀಯ ನಾಯಕರು ಈಗಾಗಲೇ ಅಬ್ಬರದ ಪ್ರಚಾರ(campaign) ನಡೆಸುತ್ತಿದ್ದಾರೆ. ಇಂದು ವರುಣ ಕ್ಷೇತ್ರಕ್ಕೆ ಸೇರಿದ ಮೆಲ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ(v.somanna) ರೋಡ್ ಶೋ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಸಿಸಿ ಮಾತನಾಡಿದ ಅವರು, ʻಈ ಕ್ಷೇತದಲ್ಲಿ 15 ವರ್ಷದಲ್ಲಿ ಏನು ಕೆಲಸಗಳು ನಡೆದಿದೆಯೋ ಆ ಕೆಲಸಗಳನ್ನು ನಾನು 5ವರ್ಷಗಳಲ್ಲಿ ಮಾಡಿ ವರುಣ(varuna) ಕ್ಷೇತ್ರವನ್ನು ಮಾದರಿ ಕ್ಷೆತ್ರವಾಗಿ ಬೆಂಗಳೂರಿನ ಗೋವಿಂದರಾಜನಗರ ಯಾವ ರೀತಿ ಮಾದರಿ ಹೊಂದಿದೆಯೋ ಆ ರೀತಿಯಲ್ಲಿ ಅಭಿವೃದ್ಧಿ ಪಡಿಸುವೆ.

ಬೆಂಗಳೂರು(bangalore) ನಗರ ಯಾವರೀತಿ ಅಂತರರಾಷ್ಟ್ರೀಯಮಟ್ಟದಲ್ಲಿ ಬೆಳೆದಿದಿಯೋ ಆ ರೀತಿ ಮೈಸೂರು(mysore) ನಗರವನ್ನು ಅಭಿವೃದ್ಧಿ ಪಡಿಸುವೆ. ನಿಮ್ಮ ವೋಟಿನ ಶಕ್ತಿ ಮತ್ತು ಬೆಲೆ ಏನೆಂದು ತೋರಿಸುವೆ. ಅದಕೋಸ್ಕರ ಕಮಲದ ಗುರುತಿಗೆ ಈ ಬಾರಿ ಮತ ನೀಡಿ ನನ್ನನ್ನು ಜಯಶೀಲನನ್ನಾಗಿ ಮಾಡಬೇಕೆಂದು ಕೇಳಿಕೊಳ್ಳುತೇನೆ. ನನ್ನಗುರಿ ಅಭಿವೃದ್ಧಿ ಪರ್ವ. ಕೇಂದ್ರ ಸರ್ಕಾರದ ನಮ್ಮ ಪ್ರಧಾನಿಯವರಾದ ನರೇಂದ್ರ ಮೋದಿ(PM narendramodi) ನೇತೃತ್ವದ ಬಿಜೆಪಿ ಸರ್ಕಾರ(BJP government) ಕೋವಿಡ್ ವೇಳೆ 132 ಕೋಟಿ ಜನರಿಗೆ ಏಕಕಾಲದಲ್ಲಿ ಲಸಿಕೆ ನೀಡಿದ ಸರ್ಕಾರ. ಬಿ. ಎಸ್.ಯಡಿಯೂರಪ್ಪನವರು(BS yediyurappa) ಕೂಡ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯಕ್ರಮ ನಿರ್ವಹಿಸಿದರು. ಇಂದು ಲಕ್ಷ್ಮೀಪುರ, ಶಿವಪುರ, ಹರೋಹಳ್ಳಿ, ಮೆಲ್ಲಹಳ್ಳಿ, ಬಡಗಲಪುರ, ಮೂಡಲಪುರ, ಚಟ್ನಹಳ್ಳಿ ಮತ್ತು ಪಾಳ್ಯ, ಮಹಾದೇವಿ ಕಾಲೋನಿ, ದುದ್ದಗೆರೆ, ಮುಂತಾದ ಕಡೆ ಮಾತಾಯಾಚನೆ ಮಾಡಿದರು ಈ ಸಂದರ್ಭದಲ್ಲಿ ಪ್ರತಾಪ್ ಸಿoಹ,(pratap simha) ಅಪ್ಪಣ್ಣ, ವರುಣಕ್ಷೇತ್ರಧ್ಯಕ್ಷ ಕಲ್ಮಹಳ್ಳಿ ವಿಜಯಕುಮಾರ ಪ್ರಕಾಶ್ ಎಸ್. ಎಂ ಪಿ ಡೇವಲಪ್ಪರ್, ಕೇಬಲ್ ಮಹೇಶ್, ಮೆಲ್ಲಹಳ್ಳಿಮಹದೇವಸ್ವಾಮಿ ನಾಗೇಂದ್ರ ವೀರಭದ್ರಪ್ಪ ಎಲ್ಲ ಗ್ರಾಮಗಳ ಬಿಜೆಪಿ(BJP) ಮುಖಂಡರುಗಳು ನೂರಾರು ಸಂಖ್ಯೆಯ ಮಹಿಳೆಯರು ಸಾಥ ನೀಡಿದ್ರು.