2024 ರ ಲೋಕಸಭಾ ಚುನಾವಣೆ ಹಿನ್ನೆಲೆ.
ಬೆಂಗಳೂರು ಗ್ರಾಮಾಂತರ ಗೆಲ್ಲಲೇಬೇಕೆಂದು ಪಣತೊಟ್ಟ ಬಿಜೆಪಿ.ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಮೈತ್ರಿ ಮೊರೆ ಹೋಗಿರುವ ಬಿಜೆಪಿ ಹೈಕಮಾಂಡ್.ಇದೇ ಕ್ಷೇತ್ರಕ್ಕೀಗ ಅಷ್ಟಪಾಲಕರನ್ನು ನೇಮಿಸಿ, ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಲು ತಂತ್ರ ಹೆಣೆದಿರುವ ಬಿಜೆಪಿ ನಾಯಕರು.ಹಾಗಾದ್ರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮಾಡಿಕೊಂಡಿರುವ ತಂತ್ರಗಾರಿಕೆಯಾದ್ರೂ ಏನು?
ಪ್ರತಿಧ್ವನಿ ಬಿಚ್ಚಿಡುತ್ತಿದೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗೆಲ್ಲಲು ಬಿಜೆಪಿ ಮಾಡಿಕೊಂಡಿರುವ ತಂತ್ರಗಾರಿಕೆಯ ಇನ್‌ಸೈಡ್ ಸ್ಟೋರಿಯನ್ನು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ವಿಸ್ತೀರ್ಣ ಹಾಗೂ ಜನಸಂಖ್ಯೆ ಎರಡಲ್ಲೂ ಅತ್ಯಂತ ದೊಡ್ಡ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದೆ.8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕ.ಹೀಗಾಗಿ, ಸದ್ಯ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್. ಮಂಜುನಾಥ್ ಅಖಾಡಕ್ಕಿಳಿಸಿ ರಾಜಕೀಯ ಮೇಲಾಟ.ಡಾ.ಸಿ.ಎನ್.ಮಂಜುನಾಥ್ ಗೆಲುವಿಗಾಗಿ ಅವಿರತವಾಗಿ ಶ್ರಮಿಸಲು ವೇದಿಕೆ ಸಿದ್ಧಪಡಿಸುತ್ತಿರುವ ಬಿಜೆಪಿ ನಾಯಕರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಿಗೂ 8 ಶಾಸಕರುಗಳನ್ನು ನೇಮಿಸಿ, ಅಷ್ಟಪಾಲಕರಂತೆ ಕಾರ್ಯನಿರ್ವಹಿಸುವಂತೆ ಬಿಜೆಪಿ ತಂತ್ರ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ, ಅನೇಕಲ್, ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಬ್ಬೊಬ್ಬ ಬಿಜೆಪಿ ಶಾಸಕರ ನಿಯೋಜನೆಗೆ ನಿರ್ಧಾರ.ಚುನಾವಣೆ ಮುಗಿಯುವವರೆಗೂ ಆಯಾ ಕ್ಷೇತ್ರದಲ್ಲಿ ಶಾಸಕರುಗಳು ಹಗಲಿರುಳು ಕಾರ್ಯನಿರ್ವಹಣೆ ಮಾಡಬೇಕು.ಅದರಲ್ಲೂ ಪ್ರಮುಖವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ ಜನಪ್ರತಿನಿಧಿಯಾಗಿದ್ದು, ಅವರ ಕ್ಷೇತ್ರದಲ್ಲಿ 7 ಲಕ್ಷ ಮತಗಳಿದೆ.ಇದರಲ್ಲಿ ಶೇ.90% ಕ್ಕೂ ಹೆಚ್ಚು ಮತ ಚಲಾವಣೆಯಾಗುವಂತೆ ನೋಡಿಕೊಂಡು ಡಾ.ಸಿ.ಎನ್. ಮಂಜುನಾಥ್‌ಗೆ ದೊಡ್ಡ ಪ್ರಮಾಣದ ಮತಗಳನ್ನು ಲೀಡ್ ಆಗಿ ಕೊಡಿಸಬೇಕು.
ಇತ್ತ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಜನಪ್ರತಿಯಾಗಿದ್ದು, ಅವರ ಕ್ಷೇತ್ರದಲ್ಲಿ 5 ಲಕ್ಷ ಮತದಾರರಿದ್ದಾರೆ.ಈ ಕ್ಷೇತ್ರದಲ್ಲೂ ಕೂಡ ಶೇ.90% ಕ್ಕಿಂತ ಹೆಚ್ಚು ಮತಗಳ ಲೀಡ್ ಮಂಜುನಾಥ್ ಪರ ಚಲಾವಣೆಯಾಗುವಂತೆ ನೋಡಿಕೊಳ್ಳುವುದರೊಂದಿಗೆ ಲೀಡ್ ಕೊಡಿಸಲೇಬೇಕು.ಅನೇಕಲ್‌ನಲ್ಲಿ 4 ಲಕ್ಷ ಮತಗಳಿದೆ.ಇಲ್ಲೂ ಕೂಡ ಡಾ.ಮಂಜುನಾಥ್‌ಗೆ ಲೀಡ್ ಕೊಡಿಸಲೇಬೇಕು.ಈ ಮೂರು ಕ್ಷೇತ್ರಗಳಲ್ಲೇ ಲೆಕ್ಕ ಹಾಕಿದ್ರೆ, 7+5+4 =16 ಲಕ್ಷ ಮತಗಳಾಗುತ್ತದೆ.ಜೊತೆಗೆ ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ ಮತ್ತು ಅನೇಕಲ್ ಭಾಗಗಳಲ್ಲಿ ನಗರಗಳೇ ಹೆಚ್ಚಾಗಿದ್ದು, ಬಿಜೆಪಿ ಬೆಂಬಲಿಸುವ ಮತಗಳಿದೆ.ಇಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಈ 3 ಕ್ಷೇತ್ರಗಳಲ್ಲೂ ಬಿಜೆಪಿ ಮತಗಳನ್ನು ಲೀಡ್ ಆಗಿ ಮಾಡಿಕೊಳ್ಳಲೇಬೇಕು.ಇದನ್ನು ಹೊರತುಪಡಿಸಿ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಸರಾಸರಿಯಾಗಿ 2 ರಿಂದ 2.5 ಲಕ್ಷ ಮತಗಳಿದೆ.ಇದನ್ನು ಕ್ರೂಢಿಕರಣ ಮಾಡಿದ್ರೆ 2.5X5=12.50 (ಹನ್ನೆರಡು ಲಕ್ಷದ ಐವತ್ತು ಸಾವಿರ ಮತಗಳು) ಆಗಲಿದೆ.ಈ 5 ಕ್ಷೇತ್ರಗಳ ಪೈಕಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಜುಗಲ್‌ಬಂದಿ ವರ್ಕ್‌ಔಟ್ ಮಾಡಬೇಕು.ಇತ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿಗೆ ಲೋಕಸಭಾ ಚುನಾವಣೆ ಅಂದರೆ ಲೀಡ್ ಬರುತ್ತಲೇ ಇದೆ.ಇದನ್ನೇ ಈಗಲೂ ಮುಂದುವರೆಸಿದ್ರೆ, ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿಗೆ ಪ್ರಯತ್ನ ಮಾಡಿದ್ರೆ, ಮಂಜುನಾಥ್‌ಗೆ ಗೆಲುವಿನ ಹಾದಿ ಸುಲಭವಾಗಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿರುವ ಬಿಜೆಪಿ ನಾಯಕರು.ಇನ್ನು ಇದೇ ಕಾರಣಕ್ಕೆ ನಗರ ಪ್ರದೇಶಗಳಲ್ಲಿನ ಮತಗಳು ಚದುರಿ ಹೋಗಬಾರದೆಂಬ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರ ಅಳಿಯ ಡಾ.ಮಂಜುನಾಥ್‌ರನ್ನು ಬಿಜೆಪಿ ಚಿಹ್ನೆಯಡಿಯಲ್ಲಿ ಕಣಕ್ಕಿಳಿಸುತ್ತಿರುವುದು ಇಲ್ಲಿ ಗಮನಿಸಲೇಬೇಕಾದ ಅಂಶ.
ಪ್ರಬಲ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಒಕ್ಕಲಿಗ v/s ಒಕ್ಕಲಿಗ ಅಖಾಡ ನಿರ್ಮಿಸಿ ರಾಜಕೀಯವಾಗಿ ಜಿದ್ದಾಜಿದ್ದಿನ ಕ್ಷೇತ್ರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮಾರ್ಪಾಡು ಮಾಡಿ, ಸ್ವಲ್ಪ ತಂತ್ರಗಾರಿಕೆ ಮಾಡಿದ್ರೆ ಮಂಜುನಾಥ್ ಗೆಲುವು ಸುಲಭ ಎಂಬುದನ್ನು ಅರಿತಿರುವ ಬಿಜೆಪಿ.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 8 ವಿಧಾನಸಭಾ ಕ್ಷೇತ್ರಗಳಿಗೂ ಅಷ್ಟಪಾಲಕರನ್ನು ನೇಮಿಸಲು ಸಜ್ಜಾಗಿದೆ.ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಡಾ.ಸಿ.ಎನ್.ಮಂಜುನಾಥ್ ಅವರ ಗೆಲುವಿಗೆ ತಂತ್ರ ಹೆಣೆಯುತ್ತಿದೆ.