ಬೆಂಗಳೂರು : ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಅಧಿಕರಾವಧಿ ಮುಕ್ತಾಯಗೊಂಡ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು.
ನಿತಿನ್ ಅವರನ್ನು ಬೆಂಬಲಿಸಿ, ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಾದ ಅರುಣಾಚಲ ಪ್ರದೇಶದ ಪೆಮಾ ಖಂಡು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ, ಹರಿಯಾಣದ ನಯಾಬ್ ಸಿಂಗ್ ಸೈನಿ, ಗೋವಾದ ಪ್ರಮೋದ್ ಸಾವಂತ್ ಸೇರಿದಂತೆ ಹಲವು ರಾಜ್ಯಗಳ ನಾಯಕರು ಈ ವೇಳೆ ಉಪಸ್ಥಿತರಿದ್ದರು. ಇನ್ನುಳಿದಂತೆ ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳು 45 ವರ್ಷದ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಬೆಂಬಲಿಸಿ ನಾಮಪತ್ರಗಳನ್ನು ಸಲ್ಲಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರು ನಿತಿನ್ ಅವರ ಉಮೇದುವಾರಿಕೆಯ ಅರ್ಜಿಗೆ ಅನುಮೋದನೆ ನೀಡಿದ್ದಾರೆ. ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಬಿಹಾರದ ಯುವ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ಕೌಟುಂಬಿಕ ಜವಾಬ್ದಾರಿಯ ಜೊತೆಗೆ ಕೃಷಿ ಚಟುವಟಿಕೆಯಲ್ಲೂ ಮಹಿಳೆಯರು ಸಕ್ರಿಯವಾಗಬೇಕು..!!
ಇನ್ನೂ ಪ್ರಮುಖವಾಗಿ ಬಿಜೆಪಿ ಪಕ್ಷದಲ್ಲಿ ರಾಷ್ಟ್ರಾಧ್ಯಕ್ಷರ ಆಯ್ಕೆಯ ವೇಳೆ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಗಳ ಮಂಡಳಿಯ ಪ್ರತಿನಿಧಿಗಳ ಸಮಿತಿಯು ಆಯ್ಕೆಮಾಡುತ್ತದೆ. ಇದರ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿಯಾದವರು ವಹಿಸಿಕೊಳ್ಳುತ್ತಾರೆ.

ಬಿಜೆಪ ಪಕ್ಷದ ಸಂವಿಧಾನದ ಪ್ರಕಾರ, ಒಂದು ರಾಜ್ಯದ ಚುನಾವಣಾ ಸಮಿತಿಯ ಯಾವುದೇ 20 ಸದಸ್ಯರು ಜಂಟಿಯಾಗಿ ನಾಲ್ಕು ಅವಧಿಗಳಿಗೆ ಸಕ್ರಿಯ ಸದಸ್ಯರಾಗಿಬೇಕು. ಅಲ್ಲದೆ 15 ವರ್ಷಗಳ ಸದಸ್ಯತ್ವವನ್ನು ಹೊಂದಿರುವ ವ್ಯಕ್ತಿಯ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಪ್ರಸ್ತಾಪಿಸಬಹುದು. ಅಂತಹ ಪ್ರಸ್ತಾವನೆಯನ್ನು ಚುನಾವಣೆಗಳು ಪೂರ್ಣಗೊಂಡ ಕನಿಷ್ಠ ಐದು ರಾಜ್ಯಗಳು ಬೆಂಬಲಿಸಬೇಕು ಎಂಬ ಷರತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಮೈತ್ರಿಯ ಆಡಳಿತವಿದ್ದು, ಆದರೆ ಬಿಜೆಪಿಯ ಅಧಿಕಾರವಿರುವ ರಾಜ್ಯಗಳು ನಿತಿನ್ ನಬಿನ್ ಅವರಿಗೆ ಬೆಂಬಲ ಸೂಚಿಸಿದ್ದು, ಹೀಗಾಗಿ ಪಕ್ಷ ಬಿಹಾರದ ನಾಯಕನಿಗೆ ಮಣೆ ಹಾಕಿದೆ.
ಇನ್ನೂ ನಿತಿನ್ ನಬಿನ್ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿದ್ದಾರೆ. ತಮ್ಮ ತಂದೆಯ ಅಕಾಲಿಕ ಮರಣದ ನಂತರ ನಿತಿನ್ ನಬಿನ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವಂತಾಗಿತ್ತು. ಮುಖ್ಯವಾಗಿ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಬಿಜೆಪಿ ಮೈತ್ರಿಯಲ್ಲಿ ನಬಿನ್ ಸಮನ್ವಯತೆ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಅವರಿಗೆ ಮೋದಿ ಹಾಗೂ ಅಮಿತ್ ಶಾ ಜೋಡಿ ಪ್ರಮೋಶನ್ ನೀಡಿದ್ದು, ನಡ್ಡಾ ಬಳಿಕ ಕೇಸರಿ ಸಾಮ್ರಾಜ್ಯದ ಮಹತ್ವದ ಜವಾಬ್ದಾರಿ ವಹಿಸಿದೆ.












