• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ರಂಗೇರಿದ ಬಿಹಾರ ರಾಜ್ಯಸಭಾ ಚುನಾವಣೆ : ಆ ಮೂರು ಶಾಸಕರಿಂದ ರಾಹುಲ್‌ ಗಾಂಧಿಗೆ ಟೆನ್ಷನ್..!

ರಾಜ್ಯಸಭಾ ಚುನಾವಣೆ ಮುನ್ನೆಚ್ಚರಿಕೆ ಕ್ರಮವಾಗಿ, ಅಡ್ಡ ಮತದಾನದ ಭೀತಿಯಿಂದ ಮಹಾ ಮೈತ್ರಿಕೂಟವು ತನ್ನ ಶಾಸಕರನ್ನು ಪಾಟ್ನಾದ ಹೋಟೆಲ್‌ನಲ್ಲಿ ಇರಿಸಿತ್ತು.

ಪ್ರತಿಧ್ವನಿ by ಪ್ರತಿಧ್ವನಿ
March 16, 2026
in Uncategorized
0
ರಂಗೇರಿದ ಬಿಹಾರ ರಾಜ್ಯಸಭಾ ಚುನಾವಣೆ : ಆ ಮೂರು ಶಾಸಕರಿಂದ ರಾಹುಲ್‌ ಗಾಂಧಿಗೆ ಟೆನ್ಷನ್..!
Share on WhatsAppShare on FacebookShare on Telegram

ಬೆಂಗಳೂರು : ಬಿಹಾರದಲ್ಲಿ ರಾಜ್ಯಸಭಾ ಚುನಾವಣೆಗೆ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆಯೇ  ಕಾಂಗ್ರೆಸ್‌ನ ಮೂವರು ಶಾಸಕರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.  ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರದ ಸುರೇಂದ್ರ ಪ್ರಸಾದ್ ಕುಶ್ವಾಹ, ಫೋರ್ಬ್ಸ್‌ಗಂಜ್‌ನ ಮನೋಜ್ ಬಿಸ್ವಾಸ್ ಮತ್ತು ಮಣಿಹರಿಯ ಮನೋಹರ್ ಪ್ರಸಾದ್ ಸಿಂಗ್ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಕೈ ನಾಯಕರಿಗೆ ದೊಡ್ಡ ತಲೆನೋವು ಶುರುವಾಗಿದೆ.

ADVERTISEMENT
Asaduddin Owaisi : ಸಂಸತ್ತಿನಲ್ಲಿ ಏನಾಗುತ್ತಿದೆ ಅಂತ ನಮಗೆ ಗೊತ್ತಿಲ್ಲಾ, ಆ ಪರಿಸ್ಥಿತಿ ಇದೆ..! #pratidhvani

ಪ್ರತಿಷ್ಠಿತ ಚುನಾವಣೆಯಲ್ಲಿ ವಿಪಕ್ಷಗಳ ಕೂಟವಾಗಿರುವ ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿಹಾರದ ಐದು ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ನಾಮನಿರ್ದೇಶಿತರು ಕಣದಲ್ಲಿದ್ದಾರೆ. ಬಿಹಾರ ವಿಧಾನಸಭಾ ಸಂಕೀರ್ಣದಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ಮುಕ್ತಾಯವಾಗಲಿದ್ದು, ನಂತರ ಎಣಿಕೆ ಆರಂಭವಾಗಲಿದೆ.

ಇನ್ನೂ ಎನ್‌ಡಿಎ ಅಭ್ಯರ್ಥಿಗಳಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕಣದಲ್ಲಿದ್ದಾರೆ. ಆಡಳಿತಾರೂಢ ಒಕ್ಕೂಟದಿಂದ ನಾಮನಿರ್ದೇಶಿತರಾದ ಇತರ ಮೂವರು ಕೇಂದ್ರ ಸಚಿವ ರಾಮ್ ನಾಥ್ ಠಾಕೂರ್, ರಾಜ್ಯಸಭೆಯ ಹಾಲಿ ಸದಸ್ಯರಾದ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮತ್ತು ರಾಜ್ಯಸಭೆಗೆ ಮೊದಲ ಬಾರಿಗೆ ಸ್ಥಾನ ಪಡೆಯಲು ಬಯಸುತ್ತಿರುವ ಬಿಜೆಪಿಯ ಶಿವೇಶ್ ಕುಮಾರ್ ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ. ಶಿವಕುಮಾರ್

ಅಲ್ಲದೆ  ಆರ್‌ಜೆಡಿ ಅಮರೇಂದ್ರ ಧಾರಿ ಸಿಂಗ್ ಅವರನ್ನು ಕಣಕ್ಕಿಳಿಸಿದೆ, ಅವರು ಮರುಚುನಾವಣೆ ಬಯಸುತ್ತಿದ್ದಾರೆ. ಎನ್‌ಡಿಎ ನಾಲ್ಕು ಸ್ಥಾನಗಳನ್ನು ಪಡೆಯಲು ಅನುಕೂಲಕರ ಸಂಖ್ಯಾಬಲವನ್ನು ಹೊಂದಿದ್ದರೂ, ಐದನೇ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ ಸಂಖ್ಯಾಬಲದ ಕೊರತೆ ಇದೆ. ಹೀಗಾಗಿ ಮೂರು ವಿರೋಧ ಪಕ್ಷದ ಶಾಸಕರ ಬೆಂಬಲ ಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಶಾಸಕರು ಕಾಣೆಯಾದರಾ ಎಂಬ ಪ್ರಶ್ನೆ ಕಾಂಗ್ರೆಸ್‌ ಪಾಳಯದಲ್ಲಿ ಮೂಡಿದೆ.

ರಾಜ್ಯಸಭಾ ಚುನಾವಣೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಅಡ್ಡ ಮತದಾನದ ಭೀತಿಯಿಂದ ಮಹಾ ಮೈತ್ರಿಕೂಟವು ತನ್ನ ಶಾಸಕರನ್ನು ಪಾಟ್ನಾದ ಹೋಟೆಲ್‌ನಲ್ಲಿ ಇರಿಸಿತ್ತು. ಆದರೂ ಮೂವರು ಶಾಸಕರ ನಡೆಯ ಬಗ್ಗೆ ಏನು ಮಾಹಿತಿ ಸಿಗುತ್ತಿಲ್ಲ ಎಂಬುವುದು ಕಾಂಗ್ರೆಸ್‌ ನಾಯಕರ ಸಂಕಟವಾಗಿದೆ.

ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ, ಎನ್‌ಡಿಎ ಪ್ರಸ್ತುತ ಸುಮಾರು 202 ಶಾಸಕರನ್ನು ಹೊಂದಿದ್ದು, ಐದು ರಾಜ್ಯಸಭಾ ಸ್ಥಾನಗಳನ್ನು ನಿರಾಯಾಸವಾಗಿ ಪಡೆಯಲು ಕೇವಲ ಮೂರು ಶಾಸಕರ ಕೊರತೆಯಿದೆ. ಮೇಲ್ಮನೆಯಲ್ಲಿ ಸ್ಥಾನ ಗೆಲ್ಲಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 41 ಶಾಸಕರ ಬೆಂಬಲ ಬೇಕಾಗುತ್ತದೆ. ಹೀಗಾಗಿ ಬಿಹಾರದಲ್ಲಿ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯು ಉಭಯ ಪಕ್ಷಗಳಿಗೂ ಅತ್ಯಂತ ಮುಖ್ಯವಾದ ಚುನಾವಣೆಯಾಗಿದೆ ಎಂದು ಹೇಳಲಾಗುತ್ತಿದೆ.

Tags: Bihar CMBihar NewsBihar Rajyasabha electionBJP BiharCongress mlas misingINDIA BlockJDUNarendra ModiNDA allianceNitin NabinNitish KumarPolitical StrategyPratidhvaniRahul GandhiRavishankar PrasadRJDTejasviYadavUpendra Khushwah
Previous Post

ದುಬೈ ಏರ್‌ಪೋರ್ಟ್‌ ಮೇಲೆ ಇರಾನ್‌ ಮಿಸೈಲ್ ದಾಳಿ : ಹಲವು ವಿಮಾನಗಳ ರದ್ದು..

Next Post

ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಸಿಎಂ ಸಿದ್ದರಾಮಯ್ಯ..!!

Related Posts

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!
Uncategorized

ಮುಂದಿನ 5 ದಿನ ರಾಜ್ಯಾದ್ಯಂತ ಮಳೆ ಅಬ್ಬರ: ಬೆಂಗಳೂರಿಗೆ ಬಿ ಅಲರ್ಟ್‌!

by ಪ್ರತಿಧ್ವನಿ
May 22, 2026
0

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಸಿಎಂ ಸಿದ್ದರಾಮಯ್ಯ..!!

ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ ಸಿಎಂ ಸಿದ್ದರಾಮಯ್ಯ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada