ರಾಷ್ಟ್ರ ರಾಜಕಾರನದಲ್ಲಿ ತೀವ್ರ ಗದ್ದಲ ಎಬ್ಬಿಸಿರುವ ಮಹಾರಾಷ್ಟ್ರ ರಾಜಕಾರಣ ಬಗೆಹರಿಯುವಷ್ಟರಲ್ಲೆ ಇದೀಗ ಮತ್ತೊಂದು ಬಿಕ್ಕಟ್ಟು ಶುರುವಾಗಿದ್ದು ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷದ ಐವರು ಶಾಸಕರ ಪೈಕಿ ನಾಲ್ವರು ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಮೂಲಕ ಬಿಹಾರದಲ್ಲಿ ಬಿಜೆಪಿಯನ್ನು ಸಂಖ್ಯಾಬಲದಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರಸ್ತುತ ರಾಜ್ಯ ವಿಧಾನಸಬೆಯಲ್ಲಿ ಬಿಜೆಪಿ 77 ಸ್ಥಾನಗಳನ್ನು ಹೊಂದಿದ್ದು ಆರ್ಜೆಡಿ ನಾಲ್ವರು ಶಾಸಕರು ಸೇರ್ಪಡೆಯಿಂದ 79ಕ್ಕೆ ಏರಿಕೆಯಾಗಿದೆ.
ಶಾನವಾಜ್, ಇಝಾರ್, ಅಂಜರ್ ನಯಾನಿ ಮತ್ತು ಸೈಯದ್ ರುಕುಂದೀನ್ ಪಕ್ಷಾಂತರ ಮಾಡಿರುವ ನಾಲ್ವರು ಶಾಸಕರನ್ನು ಎಂದು ತಿಳಿದು ಬಂದಿದೆ.

ಈ ವರ್ಷದ ಪ್ರಾರಂಭದಲ್ಲಿ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಓವೈಸಿ ಪಕ್ಷವು ಉತ್ತರಪ್ರದೇಶದಲ್ಲಿ 90ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು ಮತ್ತು ಶೂನ್ಯ ಸುತ್ತಿತ್ತು. ಚುನಾವಣ ಪ್ರಚಾರದ ವೇಳೆ ಒವೈಸಿ ಮೇಲೆ ಗುಂಡಿನ ದಾಳಿ ನಂತರ ಶಾಸಕರು ತೀವ್ರ ಕಂಗೆಟ್ಟಿದ್ದರು ಎಂದು ತಿಳಿದು ಬಂದಿದೆ.
ಮುಸ್ಲಿಂ ಬೆಂಬಲಿತ ಪಕ್ಷವಾದ AIMIM ಪಕ್ಷವು 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಆರ್ಜೆಡಿ ಮತಬುಟ್ಟಿಗೆ ಕೈಹಾಕಿತ್ತು. ಆದರೆ, ಉತ್ತರಪ್ರದೇಶ ಜನತೆ ಓವೈಸಿ ಪಕ್ಷಕ್ಕೆ ಹೆಚ್ಚು ಮನ್ನಣೆಯನ್ನ ಕೊಡಲಿಲ್ಲ.
2025ರ ಚುನಾವನೆಯಲ್ಲಿ ಬಿಹಾರದ ಮತದಾರರು ಇನ್ನಷ್ಟು ದಿನ ಇದೇ ಪಕ್ಷದಲ್ಲಿ ಮುಂದುವರಿದರೆ ತ್ಮಗೆ ಮತ ನೀಡುವುದಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದಿರುವುದಾಗಿ ತಿಳಿಸಿದ್ದಾರೆ.












