ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ತಮ್ಮದೇ ರೀತಿಯ ಆಟ ಆಡಿ ಜನರ ಮೆಚ್ಚುಗೆಯನ್ನು ಪಡೆದಂತಹ ಗೋಲ್ಡ್ ಸುರೇಶ್ ಕಳೆದ ವಾರ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದಿದ್ದರು.

ಭಾನುವಾರದ ಎಪಿಸೋಡ್ ಮುಗಿದ ನಂತರ ,ಬಿಗ್ ಬಾಸ್, ಮನೆ ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಹಾಗಾಗಿ ಗೋಲ್ಡ್ ಸುರೇಶ್ ಅವರು ತಕ್ಷಣವೇ ಬಿಗ್ ಬಾಸ್ ಮನೆಯಿಂದ ಹೊರ ಬರಬೇಕುಎಂಬುದಾಗಿ ಹೇಳ್ತಾರೆ.
ವಿಚಾರ ಕೇಳ್ತಾ ಇದ್ದಂತೆ ಗೋಲ್ಡ್ ಸುರೇಶ್ ಕೂಡ ಗಾಬರಿಯಾಗಿ ದಿಢೀರನೆ ಮನೆಯಿಂದ ಆಚೆ ಹೋಗುತ್ತಾರೆ. ಹಾಗೂ ಗೋಲ್ಡ್ ಸುರೇಶ್ ಮನೆಯಲ್ಲಿ ಏನಾಗಿರಬಹುದು ಎಂಬ ಮಾತುಕತೆಗಳು ನಡೆದೆವು.

ಈ ನಡುವೆ ಒಂದಿಷ್ಟು ನೆಟ್ಟುಗರು ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಪೋಸ್ಟ್ ಮಾಡ್ತಿದ್ದಾರೆ.ಆದ್ರೆ ಗೋಲ್ಡ್ ಸುರೇಶ್ ಅವರ ತಂದೆ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಆಗಿಲ್ಲ ಎಂದು ತಿಳಿಯಿತು.
ಆದ್ರೆ ಇಲ್ಲಿ ತನಕ ಗೋಲ್ಡ್ ಸುರೇಶ್ ಅವರು ಯಾವುದೇ ಮಾಧ್ಯಮದ ಜೊತೆಯಾಗಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿಲ್ಲ ಹಾಗು ಮನೆಯಿಂದ ಅಸಲಿ ಕಾರಣ ಏನು ಎಂಬುದನ್ನು ಕೂಡ ಎಲ್ಲಿಯೂ ಹಂಚಿಕೊಂಡಿರಲಿಲ್ಲ.

ಇದೀಗ ಗೋಲ್ಡ್ ಸುರೇಶ್ ಅವರು ಲೈವ್ ಬಂದಿದ್ದು ತಾವು ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಅನೇಕ ಬಿಸಿನೆಸ್ ಮಾಡ್ತಿದ್ರು ಹಾಗೂ ಬಿಗ್ ಬಾಸ್ ಗೆ ಹೋಗುವಾಗ ಆ ಬಿಸಿನೆಸ್ ಕೆಲಸವನ್ನು ಹೆಂಡತಿಗೆ ವಹಿಸಿದ್ದರು. ಇಲ್ಲಿ ತನಕ ಬಿಸಿನೆಸ್ ವಿಚಾರದಲ್ಲಿ ಹೆಂಡತಿಗೆ ಯಾವುದೇ ರೀತಿಯ ಅನುಭವವಿಲ್ಲ , ಜೊತೆಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾಗಿದೆ. ಹಾಗಾಗಿ ನಿಭಾಯಿಸಲು ಕಷ್ಟವಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಇದೇ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು.
ಇದರ ಜೊತೆಗೆ ಆರೋಗ್ಯ ಸಮಸ್ಯೆಯೂ ಕೂಡ ನನ್ನನ್ನು ಕಾಡುತ್ತಿತ್ತು ಕಾಲು ನೋವು ಹಾಗೂ ಇತರೆ ಸಮಸ್ಯೆಗಳಿಂದ ಹೊರ ಬರಬೇಕಾಯ್ತು , ಈ ಟೈಮ್ ನಲ್ಲಿ ನನ್ನ ತಂದೆಯ ಬಗ್ಗೆ ಜೊತೆಗೆ ಫ್ಯಾಮಿಲಿಯ ಬಗ್ಗೆ ಒಂದಿಷ್ಟು ಸುಳ್ಳು ವದಂತಿಗಳು ಹರಿದಾಡಿದ್ವು. ಆದರೆ ಸುಳ್ಳು ವದಂತಿ ಹಬ್ಬಿಸಿದವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಸುರೇಶ್ ಮಾತನಾಡಿದ್ದಾರೆ.












