ಬಿಗ್ ಬಾಸ್ ಮನೆಯಲ್ಲಿ ಶುಕ್ರವಾರ ಬಂತು ಅಂದ್ರೆ ಕ್ಯಾಪ್ಟನ್ ಸಿ ಕಳಪೆ ಹಾಗೂ ಉತ್ತಮವನ್ನು ನೀಡುವುದು ಸಹಜ ಈ ಸಂದರ್ಭದಲ್ಲಿ ಧನರಾಜ್ ಅವರು ರಜತ್ ಅವರಿಗೆ ಕಳಪೆಯನ್ನ ಕೊಟ್ಟು ಕಾರಣಗಳನ್ನ ಹೇಳುತ್ತಾರೆ. ಇದೆ ವಿಚಾರವಾಗಿ ಅವರಿಬ್ಬರ ನಡುವೆ ಜಗಳ ಜೋರಾಗಿ ನಡೆಯುತ್ತದೆ.
ಇನ್ನು ಈ ವಾರದ ಕಳಪೆ ಯಾರಿಗಪ್ಪ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲು ಮೂಡಿತ್ತು,ಸದ್ಯ ಬಿಗ್ ಬಾಸ್ ನ ಪ್ರೋಮೋ ಹೊರಬಿದ್ದಿದ್ದು ಚೈತ್ರಾ ಹಾಗೂ ತ್ರಿವಿಕ್ರಮ್ ಇಬ್ಬರಿಗು ಕೂಡ ಒಂದೇ ಸಮ ವೋಟ್ ಸಿಕ್ಕ ಕಾರಣ ಇಬ್ಬರು ಜೈಲ್ ಗೆ ಹೋಗಿದ್ದಾರೆ..
ಇನ್ನು ಈ ವಾರ ಎಲ್ಲ ಟಾಸ್ಕ್ ನಲ್ಲು ಗೆದ್ದು ಜವಾರಿ ಮಂದಿ ತಂಡ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿತ್ತು , ಹಾಗೂ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು , ಗೋಲ್ಡ್ ಸುರೇಶ್ ಈ ವಾರದ ಕ್ಯಾಪ್ಟನ್ ಅಗಿ ಆಯ್ಕೆ ಆಗಿದ್ದಾರೆ.
ಇದೆಲ್ಲದರ ಜೊತೆಗೆ ಈ ವಾರ ಉತ್ತಮ ಯಾರಿಗೆ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು , ಹನುಮಂತನಿಗೆ ಸಿಗಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.