ಬಿಗ್ ಬಾಸ್ ಸೀಸನ್ ಕನ್ನಡ 11 60 ದಿನಗಳನ್ನು ಪೂರೈಸಿದ್ದು ಭರ್ಜರಿಯಾಗಿ ಮುನ್ನುಗ್ತಾ ಇದೆ. ಇನ್ನು ಭಾನುವಾರದ ಎಪಿಸೋಡ್ ಬಂದ್ರಂತೂ ಕಿಚ್ಚನ ಮಾತುಕತೆ ಜೊತೆಗೆ ಸ್ಪರ್ಧಿಗಳಿಗೆ ನೀಡುವಂತ ಆಕ್ಟಿವಿಟೀಸ್ ಎಲ್ಲವೂ ಕೂಡ ಪ್ರೇಕ್ಷಕರಿಗೆ ಖುಷಿ ನೀಡುತ್ತದೆ.
ಆದ್ರೆ ಭಾನುವಾರದ ಎಪಿಸೋಡ್ ನಲ್ಲಿ ನಾಮಿನೇಟಾದ ಕಂಟೆಸ್ಟೆಂಟ್ಗಳಲ್ಲಿ ಎಲಿಮಿನೇಷನ್ ಇದ್ದೇ ಇರುತ್ತದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಧರ್ಮ ಕೀರ್ತಿರಾಜ್ ಅವರು ಎಲಿಮಿನೇಟ್ ಆಗಿದ್ದರು. ಈ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು ಜೊತೆಗೆ ಪ್ರೇಕ್ಷಕರಲ್ಲಿ ಚರ್ಚೆಗಳು ಕೂಡ ನಡಿತಾ ಇತ್ತು.
ನಾಮಿನೇಟ್ ಆದ ಏಳು ಜನರಲ್ಲಿ ನಿನ್ನೆ ಗೋಲ್ಡ್ ಸುರೇಶ್ ಅವರು ಸೇವ್ ಆಗಿದ್ದರು ಉಳಿದ 6ಕಂಟೆಸ್ಟೆಂಟ್ಗಳಲ್ಲಿ ಹೆಚ್ಚಾಗಿ ಕೇಳ್ತಾ ಇದ್ದಂತಹ ಹೆಸರು ಚೈತ್ರ ಹಾಗೂ ಐಶ್ವರ್ಯ ಅವರದ್ದು.ಆದ್ರೆ ಮೂಲಗಳ ಮಾಹಿತಿ ಪ್ರಕಾರ ಐಶ್ವರ್ಯ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇನ್ನು ಇದಕ್ಕೆ ಟ್ವಿಸ್ಟ್ ನೀಡುವಂತೆ ಸದ್ಯ ವೈರಲ್ ಆಗ್ತಾ ಇರುವ ವಿಚಾರ ಏನಂದ್ರೆ.. ಸ್ವಯಿಚ್ಛೆಯಿಂದ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂಬುವುದು. ಆದ್ರೆ ಐಶ್ವರ್ಯ ಹಾಗೂ ಶೋಭಾ ಅವರಲ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ ಎಂಬುದು ಸ್ವಲ್ಪ ಕನ್ಫ್ಯೂಷನ್ ಕ್ರಿಯೇಟ್ ಮಾಡಿದೆ.