ಬಿಗ್ ಬಾಸ್ ಕನ್ನಡ ಸೀಸನ್ 11, 60ನೇ ದಿನಕ್ಕೆ ಕಾಲಿಟ್ಟಿದ್ದು ಎಲ್ಲಾ ಸ್ಪರ್ಧಿಗಳು ಕೂಡ ಒಬ್ಬರಿಗಿಂತ ಒಬ್ಬರು ಕಾಂಪಿಟೇಟಿವ್ ಆಗಿ ಪರ್ಫಾರ್ಮ್ ಮಾಡ್ತಿದ್ದಾರೆ. ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಸುದೀಪ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದು, ಮಂಜು, ಗೌತಮಿ ,ಮೋಕ್ಷಿತ ಹಾಗೂ ರಜತ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಏಳು ಕಂಟೆಸ್ಟೆಂಟ್ಗಳು ನಾಮಿನೇಟ್ ಆಗಿದ್ರು, ನಿನ್ನ ಎಪಿಸೋಡ್ ನಲ್ಲಿ ಒಬ್ಬಸ್ಪರ್ಧಿ ನಾಮಿನೇಷನ್ ನಿಂದ ಸೇವ್ ಆಗಿದ್ದಾರೆ ಅವರು ಮತ್ಯಾರು ಅಲ್ಲ ಗೋಲ್ಡ್ ಸುರೇಶ್. ಭಾನುವಾರದ ಎಪಿಸೋಡ್ ನಲ್ಲಿ ಎಷ್ಟು ಖುಷಿ ಇರುತ್ತದೆಯೋ, ಬೇಸರವೂ ಕೂಡ ಅಷ್ಟೇ ಇರುತ್ತದೆ ಕಾರಣ ಮನೆಯಿಂದ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ.
ಸದ್ಯ ಬಿಗ್ ಬಾಸ್ನ ಇಂದಿನ ಪ್ರೊಮೋ ಅವರ ಬಿದ್ದಿದ್ದು, ಆ ಪ್ರೊಮೋ ದಲ್ಲಿ ಕಿಚ್ಚ ಸುದೀಪ್ ಅವರು ನಾಮಿನೇಷನ್ ಇಂದ ಸೇಫ್ ಮಾಡ್ತಾರೆ, ಸೇವ್ ಅದ ಬಳಿಕ ಶೋಭಾ ಶೆಟ್ಟಿ ಅವರು ಕಣ್ಣೀರ್ ಹಾಕುತ್ತಾ, ಸರ್ ನನಗೆ ಈ ಮನೆಯಲ್ಲಿ ಎಲ್ಲೋ ಇರದಿಕ್ಕೆ ಆಗ್ತಾ ಇಲ್ಲ ಅನ್ನಿಸ್ತಾ ಇದೆ ಅಂತ ಹೇಳ್ತಾರೆ. ಇದಕ್ಕೆ ಸುದೀಪ ಅವರು ಅರ್ಥ ಮಾಡಿಕೊಳ್ಳಿ ನೀವು ಮನೆಯೊಳಗೆ ಯಾಕೆ ಹೋಗಿದ್ದು ಅಂತ ಎಂದು ಹೇಳ್ತಾರೆ, ನಂತರ ಶೋಭಾ ನನಗೆ ಇಲ್ಲಿ ಕಂಟಿನ್ಯೂ ಮಾಡೋದಕ್ಕೆ ಆಗಲ್ಲ ಅನ್ನಿಸ್ತಾ ಇದೆ ಸರ್ ಎಂದು ಕೈ ಮುಗಿತಾರೆ, ನಂತರ ಸುದೀಪ್ ಅವರು ನಿಮ್ಮನ್ನ ಸೇವ್ ಮಾಡಿದ ಜನರಿಗೆ ನೀವು ಈ ರೀತಿ ಮಾಡೋದಿಕ್ಕೆ ಆಗಲ್ಲ ಎಂದು ಹೇಳಿದಾಗ, ಶೋಭಾ ಅವರು ಅವರ ಎಕ್ಸ್ಪೆಕ್ಟೇಶನ್ಸ್ ನ ನಾನು ರೀಚ್ ಮಾಡೋದಿಕ್ಕೆ ಆಗುತ್ತಾ ಇಲ್ವಾ ಗೊತ್ತಿಲ್ಲ ಎಂಬುದಾಗಿ ಹೇಳ್ತಾರೆ.
ನಂತರ ಕೋಪಗೊಂಡ ಕಿಚ್ಚ, ಹೊರಗಡೆ ಹೋಗ್ಬೇಕಾ ಹಾಗಾದ್ರೆ ಡೋರ್ ಓಪನ್ ಆಗುತ್ತೆ, ನೋಡಿ ಎಂದಾಗ ಬಿಗ್ ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗುತ್ತೆ ನಂತರ ಶೋಭಾ ಅವರು ಕಣ್ಣೀರನ್ನು ಹಾಕುತ್ತಾರೆ.
ಇನ್ನು ವೈಲ್ಡ್ ಕಾರ್ಡ್ ಎಂಟ್ರಿ ಶೋಭಾ ಶೆಟ್ಟಿ ಶುರುವಿನಲ್ಲಿ ತುಂಬಾನೇ ಜೋಶ್ ನಲ್ಲಿದ್ರು, ಆದರೆ ಒಂದೆರಡು ವಾರಗಳು ಕಳೆದಂತೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಜೊತೆಗೆ ತುಂಬಾನೇ ಸೈಲೆಂಟ್ ಆಗಿದ್ದಾರೆ. ತೆಲುಗು ಬಿಗ್ ಬಾಸ್ ನಲ್ಲಿ ಇದ್ದಂತಹ ಶೋಭಾ ಶೆಟ್ಟಿ ಅವರು ಕನ್ನಡದಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗಳು ಪ್ರೇಕ್ಷಕರದ್ದಾಗಿದೆ.
ಮಂಜು ಅವರಿಗೆ ಟಕ್ಕರ್ ಕೊಡೋದಕ್ಕೆ ಕಂಟೆಸ್ಟೆಂಟ್ ಒಬ್ಬರು ಬಂದ್ರು ಎಂಬ ಮಾತುಗಳು ಮನೆಯಿಂದ ಹೊರ ಬರುತ್ತಿದ್ದು ಆದರೆ ಶೋಭಾ ಶೆಟ್ಟಿ ಅವರ ಪರ್ಫಾರ್ಮೆನ್ಸ್ ಎಲ್ಲವನ್ನು ಕೂಡ ನಿರಾಸೆ ಮಾಡಿದೆ.
ಒಟ್ಟಿನಲ್ಲಿ ಇಂದಿನ ಬಿಗ್ ಬಾಸ್ ನಲ್ಲಿ ಶೋಭಾ ಶೆಟ್ಟಿ ಅವರು ಮನೆಯಿಂದ ಹೊರ ಹೋಗ್ತಾರೆ ಯಾರು ಸೇಫ್ ಆಗ್ತಾರೆ ಯಾರು ಎಲಿಮಿನೇಟ್ ಆಗ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ.