ಬಿಗ್ ಬಾಸ್ ಕನ್ನಡ ಸೀಸನ್ 11 9ನೇ ವಾರಕ್ಕೆ ಕಾಲಿಟ್ಟಿದ್ದು ಸ್ಪರ್ಧಿಗಳು ಜೋರಾಗಿಯೇ ಆಟವನ್ನು ಆಡುತ್ತಿದ್ದಾರೆ ಇವರ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ ಈ ಸಾಮ್ರಾಜ್ಯದ ಮಹಾರಾಜ ಮಂಜು ಎಂಬುದು ಎಲ್ಲರಿಗೂ ಗೊತ್ತು.

ನಿನ್ನೆ ತನಕ ಕಂಟೆಸ್ಟೆಂಟ್ಗಳು ಮಂಜು ಅವರು ಹೇಳಿದ ಮಾತುಗಳನ್ನ ಕೇಳ್ತಾ ಇದ್ರು, ಇದೀಗ ಬಿಗ್ ಬಾಸ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಮೋಸ ಹಾಗು ಕಪಟದಿಂದ ತನ್ನ ತಂಗಿಯನ್ನು ಸಾಮ್ರಾಜ್ಯದಿಂದ ಹೊರ ಹಾಕಿದ್ರು..ಇದೀಗ ಸಾಕಷ್ಟು ವರ್ಷಗಳ ನಂತರ ಮತ್ತೆ ತಂಗಿ ಸಾಮ್ರಾಜ್ಯಕ್ಕೆ ವಾಪಸ್ ಆಗಿದ್ದು ಇಬ್ಬರ ನಡುವೆಯೂ ವಾರ್ ಜೋರಾಗಿಯೇ ನಡಿತಾ ಇದೆ.

ಮೋಕ್ಷಿತ ಅವರ ಕೆಳಗೆ ಬರುವ ಪ್ರಜೆಗಳು ಒಂದೆಡೆಯಾದ್ರೆ, ಮಂಜು ಅವರ ಅಡಿಯಲ್ಲಿ ಬರುವ ಪ್ರಜೆಗಳು ಇನ್ನೊಂದೆಡೆ. ಕೆಲವು ವಿಚಾರಗಳು ಮೋಕ್ಷಿತ ಹಾಗೂ ಮಂಜು ಅವರ ನಡುವೆ ಕಲಹಕ್ಕು ಕೂಡ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಸಾಮ್ರಾಜ್ಯ ಸೃಷ್ಟಿಯಾಗಿದೆ ಹೊರತು ಟಾಸ್ಕ್ ಯಾವುದು ಕೂಡ ನಡೆದಿಲ್ಲ. ಆದ್ರೆ ಇವತ್ತು ಯುವರಾಣಿ ಮೋಕ್ಷಿತ ಹಾಗೂ ಮಹಾರಾಜ ಮಂಜು, ಇವರಿಬ್ಬರ ಪ್ರಜೆಗಳ ನಡುವೆ ದೊಡ್ಡ ಟಾಸ್ಕ್ ನಡೆಯಲಿದ್ದು ಈ ಮಧ್ಯೆ ಮಂಜು ಹಾಗೂ ರಜತ್ ಅವರಿಗೆ ಜೋರು ಜಗಳವಾಗುತ್ತದೆ.

ಒಟ್ಟಿನಲ್ಲಿ ಬಿಗ್ ಬಾಸ್ ಈ ವಾರದ ಟಾಸ್ಕ್ ಬಿಗ್ ಬಾಸ್ ಸಾಮ್ರಾಜ್ಯ ಹೆಚ್ಚು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಕಾರಣ ಇಲ್ಲಿ ಟಾಸ್ಕಿಲ್ಲ ಮನೋರಂಜನೆಯಂತೂ ಇಲ್ಲವೇ ಇಲ್ಲ ಬರೀ ಜಗಳವಾ ಆಗಿದೆ ಎಂಬುದು ಸಾಕಷ್ಟು ಜನರ ಮಾತಾಗಿದೆ.











