ಬಿಗ್ ಬಾಸ್ ನಲ್ಲಿ ವೀಕ್ ಎಂಡ್ ಬಂತು ಅಂದ್ರೆ ಅಂದ್ರೆ ಸ್ಪರ್ಧಿಗಳಿಗೆ ಒಂದು ರೀತಿ ಖುಷಿ ಹಾಗೂ ಭಯ ಎರಡು ಕೂಡ ಇರುತ್ತದೆ.ಅದರಲ್ಲು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿಚ್ಚ ಇಡಿ ವಾರ ಯಾರು ತಪ್ಪು ಮಾಡ್ತಾರೆ ಅವರಿಗೆ ಕ್ಲಾಸ್ ತಗೊಳೋದು ಪಕ್ಕಾ..

ಇನ್ನು ಬಿಗ್ ಬಾಸ್ ನ ಇಂದಿನ ಪ್ರೋಮೋ ಹೊರ ಬಿದ್ದಿದ್ದು ಇದರಲ್ಲಿ ಕಳಪೆ ಸಿಕ್ಕಿ ಜೈಲ್ ಗೆ ಹೋದಂತ ರಜತ್ ಇತರೆ ಸ್ಪರ್ಧಿಗಳಿಗೆ ಚೆನ್ನಾಗಿ ಆಟ ಆಡಿಸ್ತಾ ಇದ್ದಾರೆ..ಹೌದು ಗೋಲ್ಡ್ ಸುರೇಶ್ ಗೆ ಬಳಸಿದ ಪದಗಳು ಸರಿ ಅಲ್ಲವೆಂದು ಹೆಚ್ಚು ಜನ ವೋಟ್ ಮಾಡಿ ರಜತ್ ಅವರನ್ನ ಜೈಲ್ ಗೆ ಕಳಿಸಿದ್ರು ಇದಕ್ಕೆ ಕೋಪಗೊಂಡು ಮತ್ತು ಕೂಡ ಅದೇ ಕೆಟ್ಟಪದಗಳನ್ನು ಬಳಸ್ತಾರೆ ,ಅಷ್ಟೇ ಅಲ್ಲದೆ ಜೈಲಿನಲ್ಲಿರುವ ಸ್ಪರ್ಧಿ ಅಡುಗಡೆಗೆ ಬೇಕಾದ ತರಕಾರಿ ಹೆಚ್ಚಿ ಕೊಡಬೇಕು ಎಂಬುವುದು ನಿಯಮ.

ಅದೇ ರೀತಿ ಭವ್ಯ ಅವರು ರಜತ್ ಅವರಿಗೆ ತರಕಾರಿಯನ್ನು ತಂದುಕೊಟ್ಟು ಕಟ್ ಮಾಡಿ ಎಂದಾಗ. ಕಟ್ ಮಾಡ್ತೀನಿ ಆದ್ರೆ ಈಗ ಅಲ್ಲ ಎರಡು ಗಂಟೆ ಕಾಯಬೇಕು ಹಾಗೂ ನನಗೆ ಹೇಗೆ ಬೇಕೋ ಹಾಗೆ ಕಟ್ ಮಾಡ್ತೀನಿ. ಅದಕ್ಕೆ ಇತರೆ ಕಂಟೆಸ್ಟೆಂಟ್ಗಳು ಹೀಗೆ ಮಾಡಬೇಡಿ ಅಂತ ಕೇಳಿದಾಗ, ರಜತ್ ಯಾಕೆ ನನಗೆ ಹೊಟ್ಟೆ ಉರ್ದಿಲ್ವಾ? ನಾನು ಜೈಲ್ ಗೆ ಬಂದಿಲ್ವಾ ಎಂಬ ಮಾತುಗಳನ್ನ ಆಡ್ತಾರೆ ಅದು ಕೂಡ ನಗುನಗುತ್ತಲೆ.

ಒಟ್ಟಿನಲ್ಲಿ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಗೋಸ್ಕರ ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ದು ಕಿಚ್ಚನ ಗ್ಲಾಸ್ ಯಾರಿಗೆ ಎಂಬ ಮಾತುಗಳು ಮನೆಯಿಂದ ಹೊರಗೆ ನಡಿತಾ ಇದೆ.!