ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲ್ಲಾ ಟಾಸ್ಕ್ ಗಳು ಕೂಡ ತುಂಬಾನೇ ವಿಭಿನ್ನವಾಗಿದ್ದು, ಕಂಟೆಸ್ಟೆಂಟ್ಗಳು ಕೂಡ ತುಂಬಾನೇ ಅಗ್ರೆಸಿವ್ ವಾಗಿ ಆಟವನ್ನು ಆಡಿದ್ರು.
ಹಾಗೂ ನಿನ್ನೆ ಎಪಿಸೋಡ್ ನಲ್ಲಿ ಕೊಳುವೆಯಿಂದ ಬರುವಂತಹ ಚೆಂಡನ್ನು ತಮ್ಮ ತಂಡಕ್ಕೆ ಮೀಸಲಿರುವ ಜಾಗದಲ್ಲಿ ಇಡಬೇಕು ಎಂಬುದು ಬಿಗ್ ಬಾಸ್ ನಿಯಮವಾಗಿತ್ತು. ಆಯಮದಂತೆ ಶೋಭಾ ಶೆಟ್ಟಿ ತಂಡದಿಂದ ಮಂಜು ಹಾಗೂ ರಜತಾಗು ಆಡಿದ್ರೆ ಭವ್ಯ ತಂಡದಿಂದ ತ್ರಿವಿಕ್ರಮ ಹಾಗೂ ಗೋಲ್ಡ್ ಸುರೇಶ್ ಆಟವನ್ನು ಆಡಿದ್ರು.
ಶುರುವಿನಲ್ಲಿ ಆಟ ಚೆನ್ನಾಗಿ ಇತ್ತು. ಆದರೆ ಮಧ್ಯದಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಜಗಳ ಜೋರಾಗಿ ನಡೆದು ರಜತ್ ಒಂದಿಷ್ಟು ಕೆಟ್ಟ ಪದಗಳನ್ನ ಬಳಸಿದರು, ಇದರಿಂದ ಸುರೇಶ್ ಮನೆಯಿಂದ ಹೊರ ಹೋಗ್ತೀನಿ ಆಟ ಆಡೋದಿಲ್ಲ ಎಂದು ಹೊರ ಬಂದ್ರು, ಆದರೆ ಕೊನೆಯಲ್ಲಿ ಗೆದ್ದವರು ರಜತ್ ಹಾಗೂ ಮಂಜು ಅವರ ತಂಡ ಅಂದ್ರೆ ಶೋಭಾ ಶೆಟ್ಟಿ ಅವರ ತಂಡವಾಗಿತ್ತು.
ನಿನ್ನೆ ಟಾಸ್ಕ್ ನಲ್ಲಿ ಎರಡು ತಂಡದ ನಾಯಕಿಯರಿಗೂ ಬಿಗ್ ಬಾಸ್ ನಿಮ್ಮ ತಂಡದ ಇಬ್ಬರು ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಎಂದಾಗ, ಶೋಭಾ ಶೆಟ್ಟಿ ರಜತ್ ಹಾಗೂ ಹನುಮಂತ ಅವರನ್ನು ಆಯ್ಕೆ ಮಾಡುತ್ತಾರೆ, ಹಾಗೂ ಭವ್ಯ ಅವ್ರು ತ್ರಿ ವಿಕ್ರಂ ಮತ್ತು ಮೋಕ್ಷಿತ ಅವರನ್ನು ಆಯ್ಕೆ ಮಾಡುತ್ತಾರೆ. ನಂತರ ಬಿಗ್ ಬಾಸ್ ಒಂದು ಟ್ವಿಸ್ಟ್ ಅನ್ನ ನೀಡ್ತಾರೆ.
ಅದೇನಪ್ಪ ಆಯ್ಕೆ ಮಾಡಿದ ಇಬ್ಬರೂ ಕಂಟೆಸ್ಟೆಂಟ್ಗಳನ್ನ ಬಿಟ್ಟು ಇನ್ನುಳಿದವರೆಲ್ಲರೂ ಕೂಡ ಬೇರೆ ಇರಬೇಕು. ನಂತರ ಇವರನ್ನ ಬಿಡ್ಡಿಂಗ್ ಮೂಲಕ ಖರೀದಿ ಮಾಡಬೇಕು ಎಂದು ಬಿಗ್ ಬಾಸ್ ಹೇಳ್ತಾರೆ, ಬಿಡ್ಡಿಂಗ್ ಜೋರಾಗಿಯೇ ನಡೆಯುತ್ತದೆ ಆದರೆ ಚೈತ್ರ ಹೆಸರನ್ನು ಬಿಗ್ ಬಾಸ್ ಹೇಳಿದಾಗ ಇವರ ಮೇಲೆ ಬಿಡ್ಡಿಂಗ್ ಮಾಡಲು ಎರಡು ತಂಡದ ನಾಯಕಿಯರು ಕೂಡ ರೆಡಿ ಇರೋದಿಲ್ಲ ಇದರಿಂದ ಚೈತ್ರ ಅವರು ಕೊಂಚ ಬೇಸರವಾಗುತ್ತಾರೆ. ಹಾಗೂ ಶೋಭ ತಂಡದಲ್ಲಿ ಕಂಟೆಸ್ಟೆಂಟ್ಗಳು ಕಡಿಮೆ ಇದ್ದರೂ ಎಂಬ ಕಾರಣಕ್ಕೆ ಬಿಗ್ ಬಾಸ್ ಚೈತ್ರ ಅವರು ಶೋಭ ತಂಡಕ್ಕೆ ಹೋಗಿ ಎಂದು ಹೇಳುತ್ತಾರೆ.
ಇದಾದ ಬಳಿಕ ಕ್ಯಾಪ್ಟನ್ ವಿಚಾರವಾಗಿ ಕಳೆದ ವಾರ ಜಗಳವಾಡಿದಂತಹ ಮಂಜು ಹಾಗೂ ತ್ರಿವಿಕ್ರಮ್ ಯಾರಿಗೂ ಗೊತ್ತಾಗದ ಹಾಗೆ ಪ್ಲಾನ್ ಮಾಡ್ತಾರೆ, ನಿನಗೆ ನಾನು ಸಪೋರ್ಟ್ ಮಾಡ್ತೀನಿ ,ನನಗೆ ನೀನು ಸಪೋರ್ಟ್ ಮಾಡು, ಒಟ್ಟಿನಲ್ಲಿ ನಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಕ್ಯಾಪ್ಟನ್ ಆಗಲೇಬೇಕು. ಆದರೆ ನಾವು ಈ ಪ್ಲಾನ್ ಮಾಡಿರೋದು ಇತರರಿಗೆ ಗೊತ್ತಾಗಬಾರದು ಎಂದು ಅವರೇ ಮಾತಾಡಿ, ನಾವಿಬ್ಬರೂ ಒಂದಾಗಿ ಆಟವಾಡಿದ್ರೆ ಈ ಮನೆಯಲ್ಲಿ ನಮ್ಮ ಆಪೋಸಿಟ್ ಯಾರು ಆಡೋದಿಕ್ಕೆ ಆಗಲ್ಲ ನಾವು 100% ವಿನ್ ಆಗ್ತಿವೆ ಎಂಬ ಮಾತುಗಳನ್ನ ಕೂಡ ಆಡ್ತಾರೆ.
ಒಟ್ಟಿನಲ್ಲಿ ಶುಕ್ರವಾರ ಬಂತು ಅಂದ್ರೆ ಈ ವಾರದ ಕ್ಯಾಪ್ಟನ್ ಯಾರಾಗ್ತಾರೆ ಕಳಪೆ ಹಾಗೂ ಉತ್ತಮ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತೆ ಅದಕ್ಕೋಸ್ಕರ ಕಾದು ನೋಡಬೇಕು