ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಇವತ್ತಿನ ಎಪಿಸೋಡ್ ನಲ್ಲಿ ಮುಂದುವರೆಯಲಿದೇ..ಹಾಗೂ ಇಂದಿನ ಪ್ರೋಮೋದಲ್ಲಿ ಹಳ್ಳಿ ಹೈದ ಹನುಮಂತ, ಐಶ್ವರ್ಯ ಮತ್ತು ಧರ್ಮ ಅವರನ್ನು ನಾಮಿನೇಟ್ ಮಾಡ್ತಾರೆ..ಈ ವಾರ ನಿಮ್ಮ ಪರ್ಫಾಮೆನ್ಸ್ ಅಷ್ಟರ ಮಟ್ಟಿಗೆ ಇರಲಿಲ್ಲ ಎಂಬುದನ್ನು ಹೇಳ್ತಾರೆ.ಇದಕ್ಕೆ ಐಶ್ವರ್ಯ ನಾವು ಎಲ್ಲ ಗೇಮ್ ಕೂಡ ಆಡಿದ್ದೀವಿ ಅಂತಾರೆ.. ದಕ್ಕೆ ಪ್ರತ್ಯುತ್ತರವಾಗಿ ಹನುಮಂತ ಗೇ ಮಾಡಿದಿರಾ ಸರಿ ಹಾಗಾದ್ರೆ ಮಾಕ್ಸ್ ಯಾಕೆ ಬರಲಿಲ್ಲ ಎಂಬ ಪಾಯಿಂಟ್ ಅನ್ನ ಹಾಕ್ತಾರೆ ಹಾಗೂ ಧರ್ಮ ಹಾಗೂ ಐಶ್ವರ್ಯ ಅವರನ್ನ ನಾಮಿನೇಟ್ ಮಾಡ್ತಾರೆ.
ಇನ್ನು ಕ್ಯಾಪ್ಟನ್ ಭವ್ಯ ನಾಮಿನೇಟ್ ಮಾಡಬೇಕು ಎಂದು ಹೇಳಿದಾಗ ನೇರವಾಗಿ ಹನುಮಂತ ಅವರನ್ನು ನಾಮಿನೇಟ್ ಮಾಡಿ , ಹನುಮಂತ ನೀಡುವ ಕಾರಣ ಯಾವುದು ಕೂಡ ಸೂಕ್ತವಾಗಿರುವುದಿಲ್ಲ, ತಮಗೆ ಇಷ್ಟ ಬಂದಂತೆ ಹೇಳುತ್ತಾರೆ. ಇದರಿಂದ ಅವರಿಗೂ ಹಾಗೂ ಇತರರಿಗೂ ತೊಂದರೆ ಆಗುತ್ತದೆ ಎಂದು ನಾಮಿನೇಟ್ ಮಾಡ್ತಾರೆ.
ಗುಂಪಿನ ನಾಯಕರಾಗಲು ರಜತ್ ಹಾಗೂ ಶೋಭಾ ಶೆಟ್ಟಿ ಅರ್ಹರ ಅಥವಾ ಅನರ್ಹರ ಎಂದು ಗೌತಮಿ ಶೋಭ ಗೆ ಅನರ್ಹ ಕೊಟ್ಟು, ಬಂದ ಮೊದಲನೇ ದಿನವೆ ನನ್ನ ಫೇಕ್ ಫೇಸ್ ಕಳಚುತ್ತಿನಿ ಎಂದು ಕಾರಣ ಹೇಳಿದ್ರಿ, ಇನ್ನು ನಿಮ್ಮ ಗುಂಪಿಗೆ ಬಂದ್ರೆ ಅದ್ರಲ್ಲೇ ನೀವು ಬ್ಯುಸಿ ಆಗ್ತೀರ ಎಂದು ಹೇಳ್ತಾರೆ. ಅದಕ್ಕೆ ಶೋಭಾ ಶೆಟ್ಟಿ ಪ್ರತ್ಯುತ್ತರವಾಗಿ ಹಾಗಾದ್ರೆ ನಿಮಗೆ ಭಯನಾ ನಾನು ನಿಮ್ಮ ಮುಖವಾಡವನ್ನ ಕಳಚುತ್ತಿನಿ ಅಂತ,ನೀವು ಫೇಕ್ ಅಲ್ಲ ಅಂದ್ರೆ ಮ್ಮ ಗುಂಪಿಗೆ ಬರಬಹುದಲ್ಲ ನಿಮ್ಮನ್ನ ನೀವು ಪ್ರೂವ್ ಮಾಡಿಕೊಳ್ಳಬಹುದು ಅಂತಾರೆ ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆಯುತ್ತದೆ.