ಸೂಪರ್‌ಸ್ಟಾರ್ ವಿಜಯ್ ಸೇತುಪತಿ(Vijay Sethupathi) ನಿರೂಪಣೆಯಲ್ಲಿದ್ದ ಬಿಗ್ ಬಾಸ್ ತಮಿಳು ಸೀಸನ್–9ರ(Bigg Boss Tamil Season 9) ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಿತು. ಈ ಸೀಸನ್‌ನ ವಿಜೇತರಾಗಿ ನಟಿ ದಿವ್ಯಾ ಗಣೇಶ್(Divya Ganesh) ಹೊರಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ವಿಜಯ್ ಸೇತುಪತಿ ಅಧಿಕೃತವಾಗಿ ದಿವ್ಯಾ ಗಣೇಶ್ ಅವರ ಹೆಸರನ್ನು ವಿನ್ನರ್ ಆಗಿ ಘೋಷಿಸಿದ್ದಾರೆ.

ದಿವ್ಯಾ ಗಣೇಶ್ ಪ್ರತಿಷ್ಠಿತ ಬಿಗ್ ಬಾಸ್ ಟ್ರೋಫಿಯ ಜೊತೆಗೆ ₹50 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಫಿನಾಲೆ ಘೋಷಣೆಯ ಕ್ಷಣದಲ್ಲಿ ದಿವ್ಯಾ ಗಣೇಶ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: BBK 12: ಮನೆ ಮಗನ ಗೆಲುವು ಸಂಭ್ರಮಿಸಿದ ಜೀ ಕನ್ನಡ: ಬಿಗ್ ಬಾಸ್ ಗೆದ್ದ ಗಿಲ್ಲಿಗೆ ವಿಶೇಷ ಶುಭಾಶಯ
ಬಿಗ್ ಬಾಸ್ ತಮಿಳು 9ನೇ ಸೀಸನ್‌ನಲ್ಲಿ ಒಟ್ಟು 24 ಸ್ಪರ್ಧಿಗಳು ಭಾಗವಹಿಸಿದ್ದರು. ನಂದಿನಿ, ಪ್ರವೀಣ್ ಗಾಂಧಿ, ಆಧಿರಾ, ಅಪ್ಸರಾ, ಕಲೈಯರಸನ್, ಪ್ರವೀಣ್ ರಾಜ್, ದುಶಾರ್, ದಿವಾಕರ್, ಪ್ರಜನ್, ವಿಯಾನಾ, ಪಾರ್ವತಿ, ಕಮ್ರುದ್ದೀನ್, ಸಾಂಡ್ರಾ, ಗಾನಾ ವಿನೋದ್, ರಮ್ಯಾ ಜೋ, ಕೆಮಿ, ಕನಿ, ಎಫ್‌ಜೆ, ಸುಭಿಕ್ಷಾ, ಶಬರಿ, ವಿಕ್ಕಲ್ಸ್ ವಿಕ್ರಮ್, ಅರೋರಾ ಹಾಗೂ ದಿವ್ಯಾ ಗಣೇಶ್ ಈ ಸೀಸನ್‌ನ ಸ್ಪರ್ಧಿಗಳಾಗಿದ್ದರು.
ಇದನ್ನೂ ಓದಿ: BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರಂತೆ ಗೊತ್ತಾ..?
ಆದರೆ ದಿವ್ಯಾ ಗಣೇಶ್, ಶಬರಿ, ವಿಕ್ಕಲ್ಸ್ ವಿಕ್ರಮ್ ಮತ್ತು ಅರೋರಾ ಫೈನಲ್ ಹಂತಕ್ಕೆ ಪ್ರವೇಶಿಸಿದ್ದರು. ಕಠಿಣ ಸ್ಪರ್ಧೆಯ ನಡುವೆಯೂ ದಿವ್ಯಾ ತಮ್ಮ ಆಟ, ತಾಳ್ಮೆ ಮತ್ತು ಸಕಾರಾತ್ಮಕ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದು ಎನ್ನರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ದಿವ್ಯಾ ಗಣೇಶ್ ಹಿನ್ನೆಲೆ ಏನು..?
1994ರ ಸೆಪ್ಟೆಂಬರ್ 12ರಂದು ತಮಿಳುನಾಡಿನ ರಾಮನಾಥಪುರಂನಲ್ಲಿ ಜನಿಸಿದ ದಿವ್ಯಾ ಗಣೇಶ್, 31 ವರ್ಷದ ಯುವ ನಟಿ. ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ಶಿಕ್ಷಣ ಮುಗಿಸಿದ ನಂತರ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟರು. 2015ರಲ್ಲಿ ತಮಿಳು ಧಾರಾವಾಹಿ ‘ಕೆಳದಿ ಕಣ್ಮಣಿ’ ಮೂಲಕ ನಟನೆ ಆರಂಭಿಸಿದ್ದ ಅವರು, ‘ವಿನ್ನೈತಾಂಡಿ ವರುವಾಯಾ’, ‘ಲಕ್ಷ್ಮಿ ವಂಧಚು’ ಸೇರಿದಂತೆ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.












