ಬಿಗ್ ಬಾಸ್ ಸೀಸನ್ 12 ಸ್ಪರ್ಧಿಯಾಗಿ ಪ್ರೇಕ್ಷಕರ ಮನ ಗೆದ್ದ ಸೂರಜ್ ಸಿಂಗ್(Suraj Singh) ಅವರ ಬದುಕಿಗೆ ರಿಯಾಲಿಟಿ ಶೋ ಮಹತ್ವದ ತಿರುವು ನೀಡಿದೆ. ಬಿಗ್ ಮನೆಯಿಂದ ಹೊರಬಂದ ಎರಡೇ ವಾರದಲ್ಲಿ ಸೂರಜ್ ಸಿಂಗ್‌ಗೆ ದೊಡ್ಡ ಅವಕಾಶ ಲಭಿಸಿದ್ದು, ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲೇ ಅವರು ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ತಮ್ಮ ಸರಳ ಸ್ವಭಾವ, ಸ್ಪಷ್ಟ ಮಾತು ಸೂರಜ್ ಸಿಂಗ್ ವಿಶೇಷ ಗಮನ ಸೆಳೆದಿದ್ದರು. ಶೋ ಮೂಲಕ ಪಡೆದ ಜನಪ್ರಿಯತೆ ಇದೀಗ ಅವರ ವೃತ್ತಿ ಬದುಕಿಗೆ ಹೊಸ ದಾರಿ ಅವಕಾಶ ತೆರೆದುಕೊಂಡಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ನಾಯಕನಾಗಿ ನಟಿಸುವ ಅವಕಾಶ ದೊರೆತಿದೆ.

ಹೊಸ ಧಾರಾವಾಹಿಯ ಪ್ರೊಮೋ ಕೂಡ ಬಿಡುಗಡೆಯಾಗಿದ್ದು, ಅದರಲ್ಲಿ ಸೂರಜ್ ಸಿಂಗ್ ಶೈನ್ ಆಗಿದ್ದಾರೆ. ಈ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಬಿಗ್ ಬಾಸ್ ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರಕ್ಕೆ ಬರಲಿರುವ ಹೊಸ ಧಾರಾವಾಹಿ ಪವಿತ್ರ ಬಂಧನದಲ್ಲಿ ಸೂರಜ್ ಸಿಂಗ್ ನಾಯಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.











