ಹುಲಿ ಉಗುರು ಲಾಕೆಟ್ ವಿಚಾರವಾಗಿ ಬಿಗ್ ಬಾಸ್ ಮನೆಯಿಂದ ಬಂಧಿತರಾಗಿದ್ದ ವರ್ತೂರ್ ಸಂತೋಷ್ ಕೊನೆಗೂ ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶ ಮಾಡಿದ್ದಾರೆ.
ಜಾಮೀನು ಸಿಕ್ಕಿ ಜೈಲಿನಿಂದ ಬಂದ ನಂತರ ಎಲ್ಲೂ ಕಾಣಿಸಿಕೊಳ್ಳದೆ ಈಗ ನೇರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಂತೋಷ್ ಬಿಗ್ ಬಾಸ್ ಮನೆ ಮತ್ತೆ ಹೋಗಲ್ವ? ತಡ ಯಾಕೆ ಆಗುತ್ತಿದೆ? ಕಾನೂನು ಸಮಸ್ಯೆ ಇದೆಯ? ಮತ್ತೆ ಮನೆ ಪ್ರವೇಶ ಮಾಡೋಕೆ ಅವರ ಮನಸ್ಥಿತಿ ಚೆನ್ನಾಗಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗಿದ್ದವು. ಈಗ ಈ ಪ್ರಶ್ನೆಗಳಿಗೆಲ್ಲ ತೆರೆ ಎಳೆದಿರುವ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಬಿಗ್ ಎಂಟ್ರಿ ಕೊಟ್ಟಿದ್ದಾರೆ.

ಶುಕ್ರವಾರ ರಾತ್ರಿಯೇ ಬಿಗ್ ಬಾಸ್ ಟೀಮ್ ಸಂತೋಷ್ ಅವರನ್ನ ಕರೆದುಕೊಂಡು ಹೋಗಿದ್ದರು. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿತ್ತು. ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತಿರುವ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿತ್ತು.