ಕಿಚ್ಚ ಸುದೀಪ್ (Kichha Sudeep) ತಾವು ಮುಂದಿನ ಸೀಸನ್ ನಿಂದ ಬಿಗ್ ಬಾಸ್ (Bigboss) ಹೋಸ್ಟ್ ಮಾಡಲ್ಲ ಎಂಬ ಪೋಸ್ಟ್ ಮಾಡಿದ್ದೇ ಮಾಡಿದ್ದು, ಇದೀಗ ಆ ಬಗ್ಗೆ ಹಲವು ರೀತಿಯ ಚರ್ಚೆ ಮತ್ತು ಆರೋಪಗಳು ಕೇಳಿಬರುತ್ತಿವೆ. ಕಲರ್ಸ್ ಕನ್ನಡ (Colors kannada) ಮತ್ತು ಬಿಗ್ ಬಾಸ್ ಟೀಮ್ ಕಿಚ್ಚ ಸುದೀಪ್ ರಿಗೆ ಅವಮಾನ ಮಾಡಿದ್ಯಾ ಎಂಬ ಚರ್ಚೆ ಗರಿಗೆದರಿದೆ.

ಈ ಹಿಂದೆ ಇದ್ದ ಬಿಗ್ ಬಾಸ್ ಟೀಮ್ ಬೇರೆ. ಪ್ರಸ್ತುತ ಈಗಿರುವ ಬಿಗ್ ಬಾಸ್ ಟೀಮ್ ಮತ್ತು ನಿದೇಶಕರೇ ಬೇರೆ. ಸದ್ಯ ಕನ್ನಡದ ಬಿಗ್ ಬಾಸ್ ತಮಿಳು ಮತ್ತು ಕೇರಳ (Tamil & Kerala) ತಂತ್ರಜ್ಞರ ಕಪಿ ಮುಷ್ಟಿಯಲ್ಲಿ ಸಿಲುಕಿದೆ. ಹೀಗಾಗಿ ಕಿಚ್ಚ ಸುದೀಪ್ ಶೋ ಬಗ್ಗೆ ಏನೇ ಸಲಹೆಗಳನ್ನು ಕೊಟ್ಟರೂ, ಬಿಗ್ ಬಾಸ್ ತಂಡ ಅದನ್ನು ನಿರ್ಲಕ್ಷಿಸಿದ್ಯಂತೆ. ಈ ಕಾರಣಕ್ಕೆ ಬೇಸರಗೊಂಡಿರುವ ಕಿಚ್ಚ, ತಾವು ಮುಂದಿನ ಸೀಸನ್ ನಡೆಯಕೊಡುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸ್ವರ್ಗ ನರಕ ಎಂಬ ಲೋಕ ಸೃಷ್ಟಿಸಿ ನರಕ ವಾಸಿಗಳಿಗೆ ಸರಿಯಾದ ವ್ಯವಸ್ಥೆ ನೀಡದಿರುವುದು, ಈ ಬಗ್ಗೆ ಲೀಗಲ್ ನೋಟೀಸ್ (Legal notice) ಬಂದ್ರೂ ಟೀಮ್ ಸರಿಯಾಗಿ ಸ್ಪಂದಿಸದೆ ಇರುವುದು, ವೀಕೆಂಡ್ ಎಪಿಸೋಡ್ ನಲ್ಲಿ ನರಕ ನಿವಾಸಿಗಳು ನಿಂತುಕೊಂಡೇ ಮಾತನಾಡುವಂತೆ ಮಾಡಿದ್ದು, ಅವರಿಗೆ ಆಸನದ ವ್ಯವಸ್ಥೆ ಮಾಡಿ ಎಂದರೂ ಮಾಡದೆಯಿದ್ದದ್ದು, ಇದೆಲ್ಲವೂ ಸುದೀಪ್ ಗೆ ನೋವು ತರಿಸಿದ್ದು, ಹೀಗಾಗಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ.