2023ರ ಕರ್ನಾಟಕ ವಿಧಾನಸಭಾ ಚುನಾವಣೆ(karnataka assembly election 2023) ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ ರಾಜಕೀಯ ನಾಯಕರು ಅಖಾಡಕ್ಕಿಳಿದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಶಿಗ್ಗಾವಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,(cm basavaraj bommai) ʻಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ನಿಲ್ಲಿಸಬೇಡಿ ಮುಸ್ಲೀಂ ಸಮುದಾಯದ ಮುಖಂಡರಿಗೆ ಕಿವಿ ಮಾತು ಹೇಳಿದರು. ʻಯಾವ ಮಕ್ಕಳ ಕೈಯ್ಯಲ್ಲಿ ಪೆನ್ನು ಇರಬೇಕಿತ್ತೋ, ಅವರ ಕೈಯ್ಯಲ್ಲಿ ಪಾನಾ ಪಕ್ಕಡ್ ಇರುತ್ತಿತ್ತು. ನಿಮ್ಮ ಕಷ್ಟ ಅರ್ಥ ಆಗುತ್ತದೆ. ಆದರೆ, ಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ನಿಲ್ಲಿಸಬೇಡಿ ವಿದ್ಯಾನಿಧಿ ಯೋಜನೆ ಎಲ್ಲ ವರ್ಗದ ಸಮುದಾಯದ ಮಕ್ಕಳಿಗೆ ದೊರೆತಿದೆ. ಅಲ್ಪ ಸಂಖ್ಯಾತ ಸಮುದಾಯದವರು ಅನುಕೂಲ ಪಡೆದಿದ್ದಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ(basavaraj bommai) ಹೇಳಿದರು.
ಶಿಗ್ಗಾವಿ ಸವಣೂರು ಸಂತ ಶಿಶುನಾಳ ಶರೀಫರ ನಾಡು. ನಮ್ಮ ನಡುವೆ ಸಂಬಂಧಗಳಿವೆ. ನಾನು ಯಾವಾಗಲೂ ಎರಡು ಮಾತು ಹೇಳುತ್ತೇನೆ. ಒಂದು ತಿಂಗಳು ಚುನಾವಣೆ,(election 2023) ಐವತ್ತೊಂಬತ್ತು ತಿಂಗಳು ಅಭಿವೃದ್ಧಿ ಅಂತ. ನಾನು ಅದನ್ನು ಪಾಲಿಸುತ್ತಾ ಬಂದಿದ್ದೇನೆ. ಈ ಚುನಾವಣೆಯಲ್ಲಿ(election) ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದೆ. ಎಲ್ಲ ಸಮುದಾಯಗಳು ಜಾಗೃತರಾಗಿದ್ದಾರೆ. ಜನರು ಯಾರು ಅಭಿವೃದ್ಧಿ ಮಾಡುತ್ತಾರೋ ಅವರಿಗೆ ಮತ ಹಾಕುವ ಆಲೋಚನೆ ಮಾಡುತ್ತಾರೆ ಅಂತ ಸಿಎಂ ಬಸವರಾಜ ಬೊಮ್ಮಾಯಿ(basavaraj bommai) ಹೇಳಿದ್ರು. ʻನಾವು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದೇವೆ. ಅದರ ಫಲವನ್ನು ಎಲ್ಲ ಸಮುದಾಯದವರು ಪಡೆಯುತ್ತಾರೆ. ಶಿಗ್ಗಾವಿ ಸವಣೂರಿನಲ್ಲಿ 32 ಸಾವಿರ ರೈತರಿಗೆ ಇದರ ಲಾಭ ದೊರೆತಿದೆ. ʻನಾನು ಎಲ್ಲಾ ಸಮುದಾಯ ಮಠಗಳು, ಮಸೀದಿಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ನೀವೆಲ್ಲರೂ ಸೇರಿ ಈ ಬಾರಿ ನನಗೆ ಬೆಂಬಲ ಸೂಚಿಸಲು ಬಂದಿದ್ದೀರಿ. ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಬೆಂಬಲ ಸಹಕಾರ ಇರಲಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.