
ಬೆಂಗಳೂರು :ಬಸ್ ಪ್ರಯಾಣಿಕರಿಗೆ ದೊಡ್ಡ ಶಾಕ್ ಎದುರಾಗಿದೆ. ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸರ್ಕಾರ ಸುಳಿವು ನೀಡುತ್ತಲೇ ಇತ್ತು.ಇದೀಗ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು,

ಇಂದು ಮಧ್ಯರಾತ್ರಿಯಿಂದಲೇ ಸಾರಿಗೆ ಬಸ್ ಪ್ರಯಾಣ ದರ ಏರಿಕೆಯಾಗಲಿದೆ. ಇನ್ನು BMTC, KSRTC, NWKRTC, KKRTC ನಾಲ್ಕು ಸಾರಿಗೆ ಬಸ್ ಗಳ ದರ ಏರಿಕೆಯಾಗಲಿದ್ದು, ಶೇಕಡಾ 15 ರಷ್ಟು ಟಿಕೆಟ್ ದರ ಹೆಚ್ಚಳವಾಗಲಿದೆ. ಈ ಪರಿಷ್ಕೃತ ಟಿಕೆಟ್ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದೆ.




