ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ಆಫರ್ ಬಂದಿದೆ ಎಂದು ಮಂಡ್ಯ ಶಾಸಕ ರವಿ ಗಣಿಗ ಹೇಳಿಕೆ ನೀಡಿದ್ದರು. ಆಪರೇಷನ್ ಕಮಲಕ್ಕೆ ಬಿಜೆಪಿ ಪ್ರಯತ್ನ ಮಾಡ್ತಿದೆ ಎನ್ನುವುದು ಅವರ ಹೇಳಿಕೆಯ ಉದ್ದೇಶ ಆಗಿತ್ತು. ಇದೀಗ ಶಾಸಕ ರವಿಗಣಿಗ ವಿರುದ್ಧ ಕೆಂಡಕಾರಿದೆ.
ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ರವಿ ಗಣಿಗ ವಿರುದ್ಧ ಬಿಜೆಪಿ ದೂರು ದಾಖಲು ಮಾಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ದೂರು ಸಲ್ಲಿಕೆ ಮಾಡಲಾಗಿದ್ದು, ಶಾಸಕ ರವಿ ಗಣಿಗ ವಿರುದ್ಧ ಕ್ರಮಕ್ಕೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ಮಂಡ್ಯ ಶಾಸಕ ರವಿ ಗಣಿಗ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಇದು ಸಂಪೂರ್ಣ ಸತ್ಯಕ್ಕೆ ದೂರವಾಗಿರುವ ವಿಚಾರ. ಆಪರೇಷನ್ ಕಮಲದಂತ ಯಾವುದೇ ವಿಚಾರ ಬಿಜೆಪಿಯ ಮುಂದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.