
ಬೀದರ್: ಇಲ್ಲಿನ ವಿದ್ಯಾನಗರದ ಮೆಥೋಡಿಸ್ಟ್ ಚರ್ಚ್ ಬೆಳ್ಳಿ ಮಹೋತ್ಸವದ ಎರಡು ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ ತೆರೆ ಬಿತ್ತು.ವಿದ್ಯುತ್ ದೀಪಗಳಿಂದ ಅಲಂಕರಿಸಿದ ಚರ್ಚ್ ಆವರಣದಲ್ಲಿ ಎರಡು ದಿನ ಜಾತ್ರೆಯ ವಾತಾವರಣ ಇತ್ತು. ವಿವಿಧ ಭಾಗಗಳ ಕ್ರೈಸ್ತರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಎರಡು ದಿನ ದೈವ ಸಂದೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಭಾನುವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಮೈಲೂರ್ ಕ್ರಾಸ್‍ನಿಂದ ವಿದ್ಯಾನಗರ ಚರ್ಚ್ ವರೆಗೆ ನಡೆದ ಮೆರವಣಿಗೆಯಲ್ಲಿ ನೂರಾರು ಜನ ಭಾಗವಹಿಸಿ ಮೈಮರೆತು ಹೆಜ್ಜೆ ಹಾಕಿದರು. ಸಾರೋಟಿನಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್. ಕರಕರೆ ಅವರ ಮೆರವಣಿಗೆ ಮಾಡಲಾಯಿತು. ರಾತ್ರಿ ನಡೆದ ಕಾರ್ಯಕ್ರಮದಲ್ಲಿ ದೈವ ಸಂದೇಶ ನೀಡಿದ ಬಿಷಪ್ ಎನ್.ಎಲ್. ಕರಕರೆ, ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯಿಂದ ಇರಬೇಕು. ಎಲ್ಲ ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು. ರಾತ್ರಿ ನಡೆದ ಕಾರ್ಯಕ್ರಮದಲ್ಲಿ ದೈವ ಸಂದೇಶ ನೀಡಿದ ಬಿಷಪ್ ಎನ್.ಎಲ್. ಕರಕರೆ, ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯಿಂದ ಇರಬೇಕು. ಎಲ್ಲ ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂದು ತಿಳಿಸಿದರು.