ಬೀದರ್: ನ್ಯಾಷನಲ್ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕರ್, ಕರ್ನಾಟಕ ಲೈಂಗಿಕ ಕಾರ್ಮಿಕರ ಯೂನಿಯನ್, ಸಂಗಮ- ಸಂಗ್ರಾಮ್- ಸಾಥಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಅಂತರರಾಷ್ಟ್ರೀಯ ಲೈಂಗಿಕ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಶುಕ್ರವಾರ ವಕಾಲತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂವಿಧಾನದ ಪೀಠಿಕೆ ಓದುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಕೀಲರು, ಲೈಂಗಿಕ ಅಲ್ಪಸಂಖ್ಯಾತರು, ಪೊಲೀಸರು, ವಿವಿಧ ಸಂಘಟನೆಗಳವರು ಪಾಲ್ಗೊಂಡಿದ್ದರು.ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಮ್ಮ ಮಾತನಾಡಿ, ಲೈಂಗಿಕ ಕಾರ್ಮಿಕರು ಕಳಂಕ, ತಾರತಮ್ಯದಿಂದ ಮುಕ್ತರಾಗಬೇಕು. ಇತರರಂತೆ ಅವರು ಉದ್ಯಮಶೀಲರಾಗಬೇಕು.
ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.ಎಫ್‌ಪಿಎಐನ ಶ್ರೀನಿವಾಸ್ ಬಿರಾದಾರ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗುರುರಾಜ, ರಾಮ್ ಸಿಂಗ್ ರಾಠೋಡ್, ಸಂಗಮ ಸಂಸ್ಥೆ ನಿರ್ದೇಶಕ ರಾಜೇಶ್ , ಭೀಮ್, ಮಹೇಶ್, ಭಾರತಿ, ಶಕುಂತಲಾ ಮತ್ತಿತರರು ಪಾಲ್ಗೊಂಡಿದ್ದರು.