
ಬೀದರ್:ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ.ಜಿಲ್ಲೆಯ ಬೀದರ್, ಹುಮನಾಬಾದ್, ಭಾಲ್ಕಿ, ಔರಾದ್ ಬಹುತೇಕ ಭಾಗಗಳಲ್ಲಿ, ಚಿಟಗುಪ್ಪದ ಕೆಲವು ಕಡೆಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಬೀದರ್ ನಗರದಲ್ಲಿ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.

ತಾಲ್ಲೂಕಿನ ಚಿಟ್ಟಾ, ಜನವಾಡ, ಶಹಾಪುರ,ಕಮಠಾಣ, ಔರಾದ್ ಸಿರ್ಸಿ, ಮಂದಕನಳ್ಳಿ, ಬಾವಗಿ, ಯದಲಾಪೂರ,ಯಾಕತಪೂರ, ಬೆನಕನಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆ ಸುರಿದಿದೆ.
ದೈನಂದಿನ ಕೆಲಸ ಮುಗಿಸಿಕೊಂಡು ಹೋಗುತ್ತಿರುವವರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡು ಹೆಜ್ಜೆ ಹಾಕಿದರು.ಕಳೆದ ಕೆಲ ದಿನಗಳಿಂದ ಮಳೆಯಾಗಿರಲಿಲ್ಲ. ಬುಧವಾರ ಸುರಿದಮಳೆಗೆ ವಾತಾವರಣ ಮತ್ತಷ್ಟು ತಂಪಾಗಿದೆ.







