ಬೀದರ್- ಬೆಂಗಳೂರು ನಡುವೆ ‘ಸ್ಟಾರ್ ಏರ್’ ವಿಮಾನ ಸಂಚಾರ ಇಂದು ಬುಧವಾರ ಅಧಿಕೃತವಾಗಿ ಆರಂಭವಾಗಲಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.
ವಿಮಾನ ಸೇವೆಯು ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಲಭ್ಯವಿರಲಿದೆ. ಒಂದು ಬದಿಗೆ ಒಂದು ಸೀಟು ಮತ್ತೊಂದು ಬದಿಗೆ ಎರಡು ಆಸನಗಳಿರುವ ವಿಮಾನದಲ್ಲಿ ಒಟ್ಟು 50 ಮಂದಿ ಸಂಚರಿಸಬಹುದಾಗಿದೆ.
50 ನಿಮಿಷಗಳಲ್ಲಿ ವಿಮಾನ ಬೀದರ್‌ನಿಂದ ಬೆಂಗಳೂರಿಗೆ ತಲುಪಲಿದ್ದು, ಪ್ರಯಾಣ ದರ ₹ 2,599 ನಿಗದಿ ಪಡಿಸಲಾಗಿದೆ.
ಮಧ್ಯಾಹ್ನ 2.55ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟು ಸಂಜೆ 4.05ಕ್ಕೆ ಬೀದರ್‌ಗೆ ಬರಲಿದೆ. ವಿಮಾನ ಪುನಃ ಸಂಜೆ 4.35ಕ್ಕೆ ಹೊರಟು ಬೆಂಗಳೂರಿಗೆ 5.45ಕ್ಕೆ ತಲುಪಲಿದೆ.