
ಬೀದರ್: ನೆರೆ ರಾಜ್ಯಕ್ಕೆ ಅಕ್ರಮವಾಗಿ 16 ಲಕ್ಷ ರೂ. ಮೌಲ್ಯದ ಶ್ರೀಗಂಧ (sandalwood)ಸಾಗಿಸುತ್ತಿದ್ದ ಆರೋಪಿಯನ್ನು (accused) ಬಸವಕಲ್ಯಾಣ ಅರಣ್ಯ ಇಲಾಖೆ(Forest Department) ಮತ್ತು ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತೆಲಂಗಾಣ (Telangana)ರಾಜ್ಯದ ಶಂಶಾಬಾದ್ ಮೂಲದ ಪಿಕೆ ಬದ್ರುದ್ದೀನ್ ಬಂಧಿತ ಆರೋಪಿ.ತೆಲಂಗಾಣ ರಾಜ್ಯದಿಂದ ಮಹಾರಾಷ್ಟ್ರದ ಮುಂಬೈಗೆ ಅಕ್ರಮವಾಗಿ ಮಾರಾಟ ಮಾಡಲೆಂದು ಗೋಡ್ಸ್ ವಾಹನದಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಸವಕಲ್ಯಾಣ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಸವಕಲ್ಯಾಣ ನಗರ ಠಾಣೆ ಪಿಎಸ್‌ಐ ಅಂಬರೀಷ್ ವಾಗ್ಮೋಡೆ ಹಾಗೂ ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ ನೇತೃತ್ವದ ಅಧಿಕಾರಿಗಳ ತಂಡದ ದಾಳಿಯಲ್ಲಿ 16 ಲಕ್ಷ ರೂ. ಮೌಲ್ಯದ ಒಂದು ಕ್ವಿಂಟಲ್ ಶ್ರೀಗಂಧ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.












