
ನಿಮಗೆಲ್ಲಾ ಬಿಬೇಕ್ ಪಂಗೇನಿ ಬಗ್ಗೆ ತಿಳಿದಿರಬಹುದು. ನೇಪಾಳ ಮೂಲದ ಖ್ಯಾತ ಇನ್ಫ್ಲೂಯೆನ್ಸರ್. ಈ ಅಪರೂಪದ ದಂಪತಿಯ ಬಾಳಲ್ಲಿ ವಿಧಿ ಘನಘೋರ ಆಟವಾಡಿತ್ತು. ಬೈಬೆಕ್ ಅವರು ಬಹಳ ಕಾಲದಿಂದ ಮೆದುಳಿನ ಕ್ಯಾನ್ಸರ್ ನಿಂದ ಬಳಲಿ ಈಗ ಉಸಿರು ಚೆಲ್ಲಿದ್ದಾರೆ.ಈ ಕಷ್ಟ ಕಾಲಾದಲ್ಲಿ ಅವರ ಪತ್ನಿ ಸೃಜನ ಸುಬೇದಿ ಅವರು ತಮ್ಮ ಪತಿಯೊಂದಿಗೆ ನಿಂತ ರೀತಿ, ಅವರನ್ನು ನಾಲ್ಕನೇ ಹಂತದ ಮೆದುಳಿನ ಕ್ಯಾನ್ಸರ್‌ನಿಂದ ಹಾರೈಕೆ ಮಾಡುತ್ತಿದ್ದ ರೀತಿಗೆ ಇಡೀ ಇಂಟರ್ನೆಟ್ ಸಮೂಹವೇ ತಲೆಬಾಗಿತ್ತು. ಪತಿ ಪತ್ನಿ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಜೋಡಿ ಅಂದ್ರೆ ತಪ್ಪಾಗೋದಿಲ್ಲ.
ಆದ್ರೆ ಮೊನ್ನೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಕ್ಕ ವಿಡಿಯೋವೊಂದು ನೆಟ್ಟಿಗರನ್ನು ದುಃಖಕ್ಕೆ ತಳ್ಳಿದೆ. ಈ ವಿಡಿಯೋದಲ್ಲಿ ಬಿಳಿ ಸೀರೆಯನ್ನು ಧರಿಸಿರುವ ಸೃಜನಾ ಅವರು ಬಿಬೇಕ್ ಅವರ ಫೋಟೋದ ಮುಂದೆ ಕುಳಿತು ಪತಿಯ ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದಾರೆ. ಆ ಮೂಲಕ ತಮ್ಮ ಪತಿಯ ಸಾವಿನ ಸುದ್ದಿಯನ್ನು ಪರೋಕ್ಷವಾಗಿ ಅನುಯಾಯಿಗಳಿಹೆ ತಿಳಿಸಿದ್ದಾರೆ.

ಡಿಸೆಂಬರ್ 19, 2024 ರಂದು ಬಿಬೇಕ್ ಪಂಗೇನಿ ಮೆದುಳಿನ ಕ್ಯಾನ್ಸರ್ 4ನೇ ಹಂತದಿಂದ ಬಳಲುತ್ತಿರುವುದು ತಿಳಿದು ಬಂದಿರುತ್ತೆ.
ಕ್ಯಾನ್ಸರ್‌ನೊಂದಿಗೆ ಬಿಬೇಕ್ ಅವರ ಯುದ್ಧ ಬಹಳ ಘೋರವಾಗಿತ್ತು. ಆದ್ರೆ ಸೃಜನಾಳರ ಪ್ರೀತಿ ಆ ಯುದ್ಧವನ್ನು ಮೃದುವಾಗಿಸಿತ್ತು. ಪ್ರತಿನಿತ್ಯ ಸಾವಿನ ಜೊತೆ ಸೆಣೆಸುತ್ತಿದ್ದ ಪತಿಯ ಸೇವೆಯನ್ನು ಮಾಡಿದ ಸೃಜನ, ಒಂದು ಕ್ಷಣಕ್ಕೂ ಬೇಸರ ಮಾಡಿಕೊಳ್ಳದೆ ಪತಿಯನ್ನ ಸಾಲಿದ ರೀತಿಗೆ ಮತ್ತೊಂದು ಹೋಲಿಕೆ..ಉದಾಹರಣೆ ಇಲ್ಲವೇ ಇಲ್ಲ ಬಿಡಿ.

ಬಿಬೇಕ್ ಪಂಗೇನಿ ಅವರು ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ವಾಂಸರಾಗಿದ್ದರು . ಆದ್ರೆ ಕ್ಯಾನ್ಸರ್ ಪತ್ತೆಯಾದ ನಂತರ ಅವರ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತು. ಆ ನಂತರ ಕ್ಯಾನ್ಸರ್ ವಿರುದ್ಧ ದಂಪತಿಗಳ ಕೆಚ್ಚೆದೆಯ ಪ್ರಯತ್ನಗಳು ಯಾವುದೇ ಫಲ ನೀಡಲಿಲ್ಲ. ಆದ್ರೆ ಬಿಬೇಕ್ ಅವರ ಪರಿಸ್ಥಿತಿ ದಿನೇ ದಿನೇ ಹದಗೆಡುವುದು, ಹಾಸಿಗೆ ಹಿಡಿದಿರುವುದನ್ನು ಪೋಸ್ಟ್ ಗಳ ಮೂಲಕ ತಮ್ಮ ಅನುಯಾಯಿಗಳಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು.ಈ ವೇಳೆ ಅವರೊಟ್ಟಿಗೆ ಪತ್ನಿ ಸ್ಪಂದಿಸಿದ ರೀತಿ, ಜೊತೆಯಾಗಿ ಜೀವನ ಸಾಗಿಸಿದ ರೀತಿ, ಪತಿಯನ್ನು ಬಿಟ್ಟುಕೊಡದೆ ಗಟ್ಟಿಯಾಗಿ ಜೊತೆ ನಿಂತ ರೀತಿ ಅವಿಸ್ಮರಣೀಯ.

ಆದ್ರು ಆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಬಿಬೇಕ್ ಪಂಗೇನಿ ಕ್ಯಾನ್ಸರ್ ರೋಗಕ್ಕೆ ಬಲಿಯಾದರು. ಇದ್ರಿಂದ ಸೃಜನ ಅವರಿಗೆ ತಮ್ಮ ಜೀವನಡಾ ಮೇಲೆ ವೈರಾಗ್ಯ ಮೂಡಿದೆ. ಯಾಕೆಂದರೆ ಅವರು ಹಂಚಿಕೊಂಡ ಪ್ರೀತಿ ಕೇವಲ ಪ್ರಣಯ ಸಂಬಂಧವಾಗಿರಲಿಲ್ಲ, ಆದರೆ ಅಚಲವಾದ ಬೆಂಬಲ ಮತ್ತು ಬದ್ಧತೆಯ ಮೇಲೆ ನಿರ್ಮಿಸಲ್ಪಟ್ಟ ಸಂಬಂಧವಾಗಿತ್ತು. ಬಿಬೇಕ್ ಸಾವಿನೊಂದಿಗೆ ಸೃಜನಾಗೂ ಜೀವನ ಸಾಕೆನಿಸಿದೆ.
ಹೀಗಾಗಿ ಸೃಜನಾ ಪತಿಯ ಸಾವಿನ ನಂತರ,ಹಳದಿ ಹೂವಿನ ಹಾರದಿಂದ ಅಲಂಕರಿಸಲ್ಪಟ್ಟ ಬಿಬೇಕ್ ಅವರ ಫೋಟೋದ ಮುಂದೆ ಕುಳಿತು , ಸೀರೆಯ ಪಲ್ಲು ತಲೆಯ ಮೇಲೆ ಸುತ್ತಿಕೊಂಡು, ಧಾರ್ಮಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕುಳಿತಿರುವುದನ್ನು ಇತ್ತೀಚಿನ ವೀಡಿಯೊದಲ್ಲಿ ಕಾಣಬಹುದು. ಅವರ ಕಣ್ಣೀರಿನ ಹನಿಗಳು ಎದೆಯ ಭಾರವನ್ನು ಸೂಚಿಸುತ್ತವೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರ ಅನುಯಾಯಿಗಳಿಗೆ ಕೂಡ ತಮ್ಮ ಭಾವನೆಗಳನ್ನು ತಡೆಯಲಾಗಲಿಲ್ಲ. ಸೃಜನ ಅವರ ದುಃಖವನ್ನು ಫಾಲ್ವರ್ಸ್ ಕೂಡ ತಮ್ಮ ದುಃಖವೆಂದು ಪರಿಗಣಿಸಿದ್ದಾರೆ.

ಅವಳ ನೋವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಅಲ್ಲಾ ಅವಳನ್ನು ಆಶೀರ್ವದಿಸಲಿ ಎಂದು ಕೆಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು “ಮುಂದಿನ ಜನಮ್ ಮೇ ಆಪ್ ದೋನೋ ಸಾಥ್ ರಹೋಗೆ ಹುಮೇಶಾ” ಎಂದು ಸರಳವಾಗಿ ಪ್ರತಿಕ್ರಿಯಿಸಿದ್ದಾರೆ. ಸೃಜನ ಮತ್ತು ಬಿಬೇಕ್ ಅವರ ಕಥೆ ಎಷ್ಟು ಆಳವಾಗಿ ಅನೇಕರ ಹೃದಯವನ್ನು ಮುಟ್ಟಿದೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಸಂದೇಶಗಳೇ ಸಾಕ್ಷಿ.
ಬಿಬೆಕ್ ಅವರಿಗೆ ಕ್ಯಾನ್ಸರ್ ಪತ್ತೆಯಾದ ರೀತಿಯೇ ಆಘಾತಕಾರಿಯಾಗಿದೆ. ಆರಂಭದಲ್ಲಿ ತಲೆನೋವಿನಂತಹ ಸಣ್ಣ ಆರೋಗ್ಯ ಸಮಸ್ಯೆ ಎಂದು ಅದನ್ನು
ನಿರ್ಲಕ್ಷಿದ್ದರು . ಆದ್ರೆ ವಿಧಿಯಾಟ, ಶೀಘ್ರದಲ್ಲೇ ವಿನಾಶಕಾರಿ ಹಂತ ನಾಲ್ಕನೇ ಮೆದುಳಿನ ಕ್ಯಾನ್ಸರ್ ರೋಗ ವಕ್ಕರಿಸಿತ್ತು. ಆದ್ರೆ ಎಡೆ ಗುಂದದ ಪತ್ನಿ ಸೃಜನ ಅವರು ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ನಿರಂತರ ಚಿಕಿತ್ಸೆಗೆ ಪತಿಯ ಬೆನ್ನಿಗೆ ನಿಂತರು. ಆದ್ರೆ ವೈದ್ಯರು
ಬಿಬೆಕ್ ಕೇವಲ ಆರು ತಿಂಗಳು ಮಾತ್ರ ಬದುಕುತ್ತಾರೆ ಎಂದು ಭವಿಷ್ಯ ನುಡಿದಿದ್ದರೂ ಸಹ, ಸೃಜನಾ ಅವರು ಬಿಬೇಕ್‌ನ ಆರೈಕೆಯಲ್ಲಿ ಎಂದಿಗೂ ಹಿಂಜರಿಯಲಿಲ್ಲ. ಎಲ್ಲವೂ ಸರಿಯಿದ್ದು ಸಹಬಾಳ್ವೆಯಿಲ್ಲದೆ ದೂರಾಗುವ, ಸಣ್ಣ ಪುಟ್ಟ ವಿಚಾರಗಳಿಗೆ ವಿಚ್ಛೇದನ ಪಡೆಯುವ ಈ ಕಾಲದಲ್ಲಿ ಇಂಥ ಆದರ್ಶ ದಂಪತಿಯ ಬದುಕಿನ ಕಥೆ ಈ ರೀತಿ ಅಂತ್ಯವಾಗಿದ್ದು ನಿಜಕ್ಕೂ ವಿಧಿಗೆ ಶಪಿಸಬೇಕು ಎನಿಸುವ ನಿದರ್ಶನವಾಗಿದೆ.
			
                                
                                
