
ಉತ್ತರ ಪ್ರದೇಶದಲ್ಲಿ ( Uttar Pradesh) ಕಳೆದ ನಾಲ್ಕು ವರ್ಷಗಳಿಂದ ( last four years) ಒಂದಲ್ಲ ಒಂದು ರೀತಿಯ ಅಪರಾಧ ಪ್ರಕರಣಗಳು ( criminal offence ) ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಗುಂಡಿನ ದಾಳಿಗಳು ಅನ್ನುವಂತದ್ದು ಉತ್ತರ ಪ್ರದೇಶದಲ್ಲಿ ಸರ್ವೆ ಸಾಧಾರಣವಾಗಿ ಹೋಗಿದೆ. ಇದೀಗ ಭೀಮ್ ಆರ್ಮಿ ಮುಖ್ಯಸ್ಥ (Bhim Army chief) ಹಾಗೂ ಅಂಬೇಡ್ಕರ್ ವಾದಿ ಚಂದ್ರಶೇಖರ್ ಆಜಾದ್ ( Chandra Shekhar Azad) ಮೇಲೆ ಅಪರಿಚಿತ ಗುಂಪು ( Unidentified Assailants) ಗುಂಡಿನ ದಾಳಿ (Gun shot) ನಡೆಸಿದೆ. ಈ ಘಟನೆ ಇಡೀ ಉತ್ತರ ಪ್ರದೇಶದ ಹೋರಾಟಗಾರರು ಮತ್ತು ಸಾಮಾನ್ಯ ನಾಗರಿಕರಲ್ಲಿ ಭಯವನ್ನ ಹುಟ್ಟು ಹಾಕಿದೆ. ಉತ್ತರ ಪ್ರದೇಶದ (Uttar Pradesh) ಸಹರಾನ್‌ಪುರದ ದೇವಬಂದ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಈ ಘಟನೆಗೆ ದೇಶಾದ್ಯಂತ ವ್ಯಾಪಕವಾದ ಕಂಡರೆ ವ್ಯರ್ಥವಾಗಿದ್ದು ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಟೀಕೆಯ ಸುರಿಮಳೆಗಳು ಕೇಳಿ ಬಂದಿವೆ
ಇನ್ನು ಈ ಗುಂಪಿನ ದಾಳಿಯನ್ನು ನಡೆಸಲು ಶಸ್ತ್ರಸಜ್ಜಿತರಾದ ಬಂದಿದ್ದ ದುಷ್ಕರ್ಮಿಗಳು ಚಂದ್ರಶೇಖರ್ ಆಜಾದ್ ಅವರ ಕಾರನ್ನು ಹಿಂಬಾಲಿಸಿ ಸತತವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿ ವೇಳೆ ಒಂದು ಗುಂಡು ಆಜಾದ್ಗೆ ತಗುಲಿದ್ದು,ತಕ್ಷಣ ಆಜಾದ್ ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಇದೀಗ ಸದ್ಯದ ಮಟ್ಟಿಗೆ ಚಂದ್ರಶೇಖರ್ ಅಜಾದ್‌ಗೆ ಸಹರಾನ್‌ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಈ ಬಗ್ಗೆ ಉತ್ತರ ಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ಎಸ್ಪಿ ಡಾ.ವಿಪಿನ್ ತಾಡಾ ಕಾರಿನಲ್ಲಿ ಬಂದ ಕೆಲವರು ಆಜಾದ್ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ, ಅಜಾದ್ ಅವರಿಗೆ ಗುಂಡು ತಗುಲಿದೆ, ಅವರು ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಭೀಮ್ ಆರ್ಮಿ ಸಂಘಟನೆಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ನಡೆದಿರುವ ದಾಳಿಗೆ ದೇಶಾದ್ಯಂತ ವ್ಯಾಪಕವಾದ ಖಂಡನೆ ವ್ಯಕ್ತವಾಗುತ್ತಿದ್ದು ಇದೀಗ ಎಡಪಂಥಿಯ ವಿಚಾರವಾದಿಗಳು ಹಾಗೂ ಅಂಬೇಡ್ಕರ್ ವಾದಿಗಳ ಮೇಲೆ ದಬ್ಬಾಳಿಕೆ ನಡೆಸಲು ಸ್ವತಃ ಸರ್ಕಾರವೇ ಮುಂದಾಗುತ್ತಿದೆ ಎಂಬಂತಹ ಆರೋಪಗಳು ಕೇಳಿ ಬಂದಿವೆ. ಇನ್ನು ಚಂದ್ರಶೇಖರ್ ಆಜಾದ್ ಕೂಡ ಪ್ರಬಲ ಅಂಬೇಡ್ಕರ್ ಉದಿಯಾಗಿದ್ದು ಅಂಬೇಡ್ಕರ್ ಅವರ ವಿಚಾರಧಾರೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಬಹುಜನ ಚಳುವಳಿಯನ್ನು ಬಲವಾಗಿ ಕಟ್ಟುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನ ರೂಪಿಸಿಕೊಂಡಿದ್ದರು. ಇದೀಗ ಅವರ ಮೇಲೆ ನಡೆದಿರುವ ಈ ದಾಳಿ, ಬಲಪಂಥೀಯ ವಾದಿಗಳ ಪ್ರೇರಿತ ದಾಳಿ ಆಗಿರಬಹುದು ಅಥವಾ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕೆಲ ನಾಯಕರುಗಳೇ ಈ ದಾಳಿಯನ್ನು ಮಾಡಿಸಿರಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ

ಒಟ್ಟಾರೆಯಾಗಿ ಇದೀಗ ಅಂಬೇಡ್ಕರ್ ವಾದಿ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ನಡೆದಿರುವ ಗುಂಡಿನ ದಾಳಿಗೆ ವ್ಯಾಪಕ ಖಂಡನೆ ಮತ್ತು ಟೀಕೆಗಳು ವ್ಯಕ್ತವಾಗುತ್ತಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಹೋರಾಟಗಾರರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ










