ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ಗ್ರಹ ಜ್ಯೋತಿ ಯೋಜನೆಗೆ ಜನಸಾಮಾನ್ಯರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ಸಿಕ್ತಾ ಇದೆ ಇವತ್ತು ಅಂದ್ರೆ 28-06-2023 ಸಂಜೆ 4:00 ವರೆಗೆ ಸುಮಾರು 76,09,701 ಅರ್ಜಿಗಳು ಸಲ್ಲಿಕೆ ಆಗುವ ಮೂಲಕ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗೃಹ ಜ್ಯೋತಿ ಯೋಜನೆ ಪಡೆದುಕೊಂಡಿದೆ
ರಾಜ್ಯದ ಒಟ್ಟು ಆರು ವಿದ್ಯುತ್ ಕಂಪನಿಗಳಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು ಪ್ರತಿನಿತ್ಯ ಕನಿಷ್ಠ 10 ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ ಇದೀಗ ನೊಂದಣಿಗೆ ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸದ ಕಾರಣ ಸಾಕಷ್ಟು ಮಂದಿ ಸಮಯಾವಕಾಶವನ್ನು ತೆಗೆದುಕೊಂಡು ಅರ್ಜಿ ಸಲ್ಲಿಕೆಯನ್ನು ಮಾಡುತ್ತಿದ್ದಾರೆ.
ಗೃಹಜೋತಿ ಯೋಜನೆಗೆ ನೋಂದಣಿ ಆರಂಭವಾದಾಗಿನಿಂದ ಪ್ರತಿನಿತ್ಯವೂ ಸಾಕಷ್ಟ ಮಂದಿ ಉತ್ಸುಕ ಭರಿತವಾಗಿ ಗೃಹಜೋತಿ ವಿದ್ಯುತ್ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿರುವುದು ಇಂಧನ ಇಲಾಖೆಯ ಯಶಸ್ವಿಗೆ ಹಿಡಿದ ಕೈಗನ್ನಡಿ ಅಂತ ಸಾರ್ವಜನಿಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ
ರಾಜ್ಯದ ಈ ಆಡಳಿತ ಗೃಹಜೋತಿ ಯೋಜನೆಗೆ ಪ್ರತ್ಯೇಕವಾಗಿ ನೋಂದಣಿ ಲಿಂಕ್ ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆ ದುಪ್ಪಟ್ಟಾಗಿದೆ. ಇನ್ನು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲದೆ ವಿದ್ಯುತ್ ಕಚೇರಿ ನಾಡಕಚೇರಿ ಹಾಗೂ ಕಂಪ್ಯೂಟರ್ ಲ್ಯಾಪ್ಟಾಪ್ ಮೊಬೈಲ್ ಫೋನ್ನಲ್ಲಿ ಅಧಿಕೃತವಾಗಿ ಪೋರ್ಟಲ್ https://sevasindhugs.Karnataka.gov.in ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ
ಬೆಂಗಳೂರು ಒನ್ ಗ್ರಾಮ ಒನ್ ಕರ್ನಾಟಕ ಒನ್ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ನೋಂದಣಿಗೆ ನಿಗದಿತ ಸೇವಾ ಶುಲ್ಕವನ್ನಷ್ಟೇ ಪಾವತಿಸಿ ನೊಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆ ಇಟ್ಟಲ್ಲಿ ಗ್ರಾಹಕರು ಕೂಡಲೇ 24*7 ಸಹಾಯವಾಣಿ 1912 ಕ್ಕೆ ಕರೆ ಮಾಡಿ ತಿಳಿಸಬಹುದು ಅಂತಹ ಪ್ರಯತ್ನಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಅಂತ ಇಂಧನ ಇಲಾಖೆ ಸ್ಪಷ್ಟಪಡಿಸಿದೆ
ಇನ್ನು ಇದರ ಜೊತೆಗೆ ಸರ್ಕಾರ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ಅನ್ನ ಹೊರತುಪಡಿಸಿ ಇನ್ ಯಾವುದೇ ಲಿಂಕ್ ಗಳಲ್ಲಿ ನೋಂದಣಿ ಮಾಡಿಸಿಕೊಳ್ಳದಂತೆ ಹಾಗೂ ನಕಲಿ ಲಿಂಕ್ ಗಳ ಬಗ್ಗೆ ಇಂಧನ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ
ಒಟ್ಟಾರಿಯಾಗಿ ಇದೀಗ ಸಚಿವ ಕೆಜೆ ಜಾರ್ಜ್ ನೇತೃತ್ವದಲ್ಲಿ ಗೃಹಜೋತಿ ಯೋಜನೆಯ ಅನುಷ್ಠಾನಕ್ಕೆ ಇಂಧನ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನ ಮಾಡುತ್ತಿದ್ದು ಸಾರ್ವಜನಿಕರಿಂದಲೂ ಕೂಡ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿರುವುದು ಇಂಧನ ಇಲಾಖೆಯ ಈ ಗೃಹ ಜೊತೆ ಯೋಜನೆಗೆ ಬಹಳ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ ಅಂತ ಹೇಳಲಾಗುತ್ತಿದೆ..