ಉತ್ತರ ಪ್ರದೇಶ ಚುನಾವಣೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರಾಜಕೀಯ ಪಕ್ಷಗಳು ತಮ್ಮ ಲೆಕ್ಕಾಚಾರದಲ್ಲೇ ದಾಳವನ್ನ ಉರುಳಿಸುತ್ತಿದ್ದಾರೆ. ಈ ಮಧ್ಯೆ ಅಖಿಲೇಶ್ ಯಾದವ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಎಸ್ಪಿ ಮೈತ್ರಿಕೂಟದ ವಿರುದ್ದ ಕಿಡಿಕಾರಿದ್ದಾರೆ.
ಕಳೇದ ಆರು ತಿಂಗಳಿನಿಂದ ನಾನು ಮೈತ್ರಿ ವಿಚಾರವಾಗಿ ಸಾಕಷ್ಟು ಭಾರೀ ಅಖೀಲೇಶ್ ಯಾದವ್ ಅವರೊಂದಿಗೆ ಚರ್ಚಿಸಿದ್ದೇನೆ. ಮೊದಲು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು ನಂತರದ ದಿನಗಳಲ್ಲಿ ಅವರಿಗೆ ದಲಿತರ ಮತಗಳಷ್ಟೇ ಬೇಕು ದಲಿತ ನಾಯಕರಲ್ಲ ಎಂಬ ಅಂಶವನ್ನ ನಾನು ಅರಿತೆ. ಆದ್ದರಿಂದ ಅವರ ಮೈತ್ರಿಕೂಟದಿಂದ ನಾನು ಹೊರನಡೆದೆ ಎಂದು ಹೇಳಿದ್ದಾರೆ.