ಇನ್ಮುಂದೆ ಜನವರಿ 16 ಅನ್ನು ಸ್ಟಾರ್ಟ್ಅಪ್ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಇಂದು 150 ಸ್ಟಾರ್ಟ್ಅಪ್ ಕಂಪನಿಗಳ ಮುಖ್ಯಸ್ಥರೊಂದಿಗೆ ವರ್ಚುವಲ್ ಸಂವಾದ ನಡೆಸಿದ ನಂತರ ಇದನ್ನು ಘೋಷಿಸಿದ್ದಾರೆ.
ವರ್ಚುವಲ್ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನಾನು ದೇಶದ ಎಲ್ಲ ಸ್ಟಾರ್ಟ್ಅಪ್ ಗಳನ್ನು ಮೊದಲಿಗೆ ಅಭಿನಂದಿಸುತ್ತೇನೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಎಲ್ಲಾ ಯುವಕರಿಗೂ ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್ಅಪ್ ಗಳ ಈ ಸಂಸ್ಕೃತಿಯೂ ದೇಶಾದ್ಯಂತ ವ್ಯಾಪಕವಾಗಿ ಹರಡುವುದನ್ನು ಖಚಿತಪಡಿಸಿಕೊಳ್ಳಲು ನಾನು ಜನವರಿ 16 ರಂದು ರಾಷ್ಟ್ರೀಯ ಸ್ಟಾರ್ಟ್ಅಪ್ ದಿನವನ್ನಾಗಿ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆʼ ಎಂದಿದ್ದಾರೆ.