ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ (Prajwal Revanna Case) ಕೆ.ಆರ್.ನಗರ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಭವಾನಿ ರೇವಣ್ಣ (Bhavani Revanna) ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ ಹಿನ್ನಲೆ ಭಾವನಿಗೆ ಬಂಧನದ ಭೀತಿ ಎದುರಾಗಿದೆ.
ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾಗೊಂಡಿರುವ ಕಾರಣ ಎಸ್ ಐಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಗಳಿದ್ದು, ನಿನ್ನೆಯಿಂದಲೇ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.
ಹೀಗಾಗಿ ಭವಾನಿಗಾಗಿ ಎಸ್ಐಟಿ ಹುಡುಕಾಟ ಆರಂಭಿಸಿದ್ದು ಎಲ್ಲಿದ್ದರೂ ಹಿಡಿದು ತರಲು ಎಸ್ಐಟಿ ನಿರ್ಧಾರ ಮಾಡಿದಂತಿದೆ. ಆದ್ರೆ ಇತ್ತ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಭವಾನಿ ರೇವಣ್ಣ ಎಂದು ಹೇಳಲಾಗ್ತಿದೆ.
ಈ ಹಿನ್ನಲೆ ಮನೆಯ ಗೋಡೆಗ ನೋಟಿಸ್ ಅಂಟಿಸಿ ಬಂದಿದ್ದ SIT ಅಧಿಕಾರಿಗಳು ವಿಶೇಷ ಟೀಮ್ ನೊಂದಿಗೆ ಹುಡುಕಾಟ ಆರಂಭಿಸಿದ್ದಾರೆ.