ಇತ್ತೀಚೆಗೆ ಹೆಣ್ಣು ಮಗುವಿನ ತಾಯಾದ ನಟಿ ಭಾವನಾ ರಾಮಣ್ಣ ತನ್ನ ಎರಡೂವರೆ ತಿಂಗಳ ಮಗುವಿನೊಂದಿಗೆ ಭಾವನಾ ಬೆಳಗೆರೆ ಮನೆಗೆ ಭೇಟಿ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಭಾವನಾ ಬೆಳಗೆರೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜೊತೆಗೆ ಭಾವನಾ ರಾಮಣ್ಣ, ಅವರ ಮಗು ಹಾಗೂ ನಟ ಶ್ರೀನಗರ ಕಿಟ್ಟಿ ಜೊತೆಗಿರುವ ಫೋಟೋವನ್ನು ಕೂಡ ಶೇರ್ ಮಾಡಿದ್ದಾರೆ.

ತನ್ನ ಭಾವನೆಗಳೊಂದಿಗೆ ಮನೆಗೆ ಬಂದ ʼರುಕ್ಮಿಣಿʼಯಂಬ ಪುಟ್ಟ ದೇವತೆ ಎಂದು ವಿಶೇಷ ಬರಹ ಹಂಚಿಕೊಂಡಿರುವ ಭಾವನಾ ಬೆಳಗೆರೆ, ನಟಿ ಭಾವನಾ ರಾಮಣ್ಣ ತನ್ನ ಮಗಳಿಗೆ ಇಟ್ಟ ಹೆಸರನ್ನು ಕೂಡ ಬಹಿರಂಗ ಪಡಿಸಿದ್ದಾರೆ.

ಹೌದು ಭಾವನಾ ಅವರ ಪುಟಾಣಿ ಮಗಳಿಗೆ ರುಕ್ಮಿಣಿ ಎಂದು ಹೆಸರಿಟ್ಟಿದ್ದು, ಅದು ಅವರ ಅಜ್ಜಿಯ ಹೆಸರು ಕೂಡ ಆಗಿದೆ. ಅಜ್ಜಿಯ ಹೆಸರನ್ನೇ ಮಗಳಿಗೆ ಇಟ್ಟ ಕಾರಣವನ್ನೂ ಕೂಡ ಭಾವನಾ ರಾಮಣ್ಣ, ಭಾವನಾ ಬೆಳಗೆರೆ ಅವರಿಗೆ ವಿವರಿಸಿದ್ದು, ನನ್ನಮಗಳು ನನ್ನ ಅಜ್ಜಿಯ ರೀತಿ ಧೈರ್ಯವಂತೆಯಾಗಿ ಬೆಳೆಯಲಿ ಎಂದಿದ್ದಾರೆ.
ಇನ್ನು ಐವಿಎಫ್ ತಂತ್ರಜ್ಞಾನದಿಂದ ಗರ್ಭಿಣಿಯಾಗಿದ್ದ ಭಾವನಾ ರಾಮಣ್ಣ ಕಳೆದ ಸಪ್ಟೆಂಬರ್‌ನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ಆದರೆ, ಒಂದು ಮಗು ಹುಟ್ಟುವ ಮೊದಲೇ ನಿಧನ ಹೊಂದಿತ್ತು.













