ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಯಶಸ್ವಿ 117 ದಿನಗಳನ್ನು ಪೂರೈಸಿದ್ದು ಹರ್ಯಾಣ ಮುಗಿಸಿ ಪಂಜಾಬ್ ಪ್ರವೇಶಿಸಿದೆ.
ಹರಿಯಾಣದ ಅಂಬಾಲದಿಂದ ಪಂಜಾಬ್ ಪ್ರವೇಶಿಸಿದ ಯಾತ್ರೆಯನ್ನ ಸ್ಥಳೀಯ ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಬರ ಮಾಡಿಕೊಂಡರು. ಯಾತ್ರೆ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಅಮೃತಸರದಲ್ಲಿರುವ ಸ್ವರ್ಣ ಮಂದಿರಕ್ಕೆ ತೆರಳಿ ರಾಹುಲ್ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 7, 2022 ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯೂ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶದ ಮೂಲಕ ತೆರಳಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಾಗೊಳ್ಳಲಿದೆ.






