• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಹಿಂದು-ಮುಸ್ಲಿಂ ʻಭಾಯಿ-ಭಾಯಿʼ ಎಂದು ಪುನರುಚ್ಚರಿಸಿದ ಮೋಹನ್ ಭಾಗವತ್!

ಪ್ರತಿಧ್ವನಿ by ಪ್ರತಿಧ್ವನಿ
October 14, 2021
in ದೇಶ
0
ಹಿಂದು-ಮುಸ್ಲಿಂ ʻಭಾಯಿ-ಭಾಯಿʼ ಎಂದು ಪುನರುಚ್ಚರಿಸಿದ ಮೋಹನ್ ಭಾಗವತ್!
Share on WhatsAppShare on FacebookShare on Telegram

ಹಿಂದು-ಮುಸ್ಲಿಂ ಎರಡು ಧರ್ಮದವರು ಒಂದೇ ಪೂರ್ವಜರನ್ನು ಹೊಂದಿರುವ ʻಸಹೋದರರುʼ ಎಂದು ಆರ್‌ಎಸ್ಎಸ್ ಸಹ ಸಂಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಭಾರತದಲ್ಲಿ ಹೆಚ್ಚುತ್ತಿರುವ ಧೃವಿಕರಣದ ಆತಂಕದ ಸಮಯದಲ್ಲಿ ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.

ADVERTISEMENT

“ಹಿಂದುಗಳು ಮತ್ತು ಮುಸ್ಲಿಮರ ಪೂರ್ವಜರು ಒಂದೇ. ನಾವೆಲ್ಲರೂ ಸಹೋದರರು, ಒಂದೇ ದೇಶದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನಾಗರೀಕತೆ ಒಂದು, ಆರಾಧಿಸುವ ಪದ್ಧತಿ ಮಾತ್ರ ಬೇರೆ, ”ಎಂದು ಅವರು ಹೇಳಿದ್ದಾರೆ.

ಪೂಜೆ ಮಾಡುವ ಆಧಾರದ ಮೇಲೆ ನಾವು ಯಾರನ್ನು ಸಹ ತಾರತಮ್ಯ ಮಾಡುವಂತಿಲ್ಲ. ಭಾರತ ದೇಶಕ್ಕೆ ಸೇರಿದವರು ಎಂದ ಮೇಲೆ ಅವರ ಭದ್ರತೆಯ ಸಂಪೂರ್ಣ ಜವಾಬ್ದಾರಿ ನಮ್ಮದು ಎಂದು ಮಾಹಿತಿ ಆಯುಕ್ತ ಮತ್ತು ಮಾಜಿ ಪತ್ರಕರ್ತ ಉದಯ್ ಮಹೂರ್ಕರ್ ಅವರು ಬರೆದಿರುವ ‘Veer Savarkar: The man who could have prevented Partition’, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ. ಈ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿವೇಕಾನಂದರಿಗಿಂತ ಹಿಂದುತ್ವ ಭಿನ್ನವಾಗಿರಲಿಲ್ಲ ಎಂದು ಹೇಳಿದ ಅವರು, ಇದು ಮುಸ್ಲಿಂರ ವಿರುದ್ದವಲ್ಲ ನಮ್ಮ ಸಂಸೃತಿ ಉದಾರವಾಗಿದೆ, ನಮ್ಮ ಸಂಸ್ಕೃತಿ ಹಿಂದುತ್ವವಾಗಿದೆ. ದೇವರನ್ನು ಆರಾಧಿಸುವ ವಿಧಾನದಿಂದ ಯಾರು ಪ್ರತ್ಯೇಕವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಮ್ಮ (ಹಿಂದುಗಳು ಮತ್ತು ಮುಸ್ಲಿಮರ) ಪೂರ್ವಜರೊಬ್ಬರೇ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಈ ಚಿಂತನೆಯ ಪ್ರಕ್ರಿಯೆಯು ಮುಂದುವರಿದಿದ್ದರೆ, ವಿಭಜನೆಯನ್ನು ನಿಲ್ಲಿಸಲು ಒಂದು ಮಾರ್ಗವಿರುತ್ತಿತ್ತು ಎಂದು ಹೇಳಿದ್ದಾರೆ.

ಒಬ್ಬ ದೇವರು ಹಿಂದೂ-ಮುಸ್ಲಿಂ ಎರಡು ಧರ್ಮದವರಿಗೆ ಜನ್ಮ ನೀಡಿದ್ದಾನೆ ಈ ಬಗ್ಗೆ ಯಾವುದೇ ಅಸ್ಪಷ್ಟತೆ ಇರಬಾರದು ಎಂದು 17ನೇ ಶತಮಾನದ ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿ ಹೇಳಿರುವ ಮಾತನ್ನು ತಮ್ಮ ಭಾಷನದ ವೇಳೆ ಉಲ್ಲೇಖಿಸಿದರು.

ಮಾತನಾಡುವ ವೇಳೆ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರವರು ಇತ್ತೀಚಿಗೆ ತಾವು ಸಮಾರಂಭವೊಂದರಲ್ಲಿ ಮಾಡಿದ ಭಾಷನವನ್ನು ಉಲ್ಲೇಖಿಸಿ ಮಾತನಾಡಿದ ಭಾಗವತ್ ʻಅಲ್ಪಸಂಖ್ಯಾತ-ಬಹುಸಂಖ್ಯಾತ ಎಂಬುದು ಯಾವುದು ಇಲ್ಲ ಹಿಂದು-ಮುಸ್ಲಿಂ ಒಂದೇ ಸಂಸ್ಕೃತಿಯನ್ನು ಹಂಚಿಕೊಂಡಿದ್ದಾರೆ ಇದು ನಮ್ಮ ಸಂಸ್ಕೃತಿ ಮುಸ್ಲಿಮರು ನಮ್ಮ ಸಹೋದರರುʼ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ನ ಅಖಂಡ ಭಾರತದ ಕನಸುಗಳನ್ನು ತೆರೆದಿಟ್ಟ ಭಾಗವತ್ ಪಾಕಿಸ್ತಾನ, ಬಾಂಗ್ಲಾದೇಶ ಒಳಗೊಂಡ ಅಖಂಡ ಭಾರತದ ಕನಸು ನನಸಾಗುತ್ತದೆ ಎಂದು ಹೇಳಿದ್ದಾರೆ. ಇದು ಪ್ರಪಂಚಕ್ಕೂ ಅಗತ್ಯವಾಗಿದೆ, ಭಾರತದಿಂದ ಬೇರ್ಪಟ್ಟ ಯಾವ ದೇಶಗಳು ಸಂತೋಷವಾಗಿಲ್ಲ. ಲೋಹಿಯಾರವರು ಅಖಂಡ ಭಾರತದ ಕನಸು ಕಂಡಿದ್ದರು. ಭಾರತದಲ್ಲಿ ಆದರ್ಶ ಸಹೋದರತ್ವ ಸಮಾಜವನ್ನು ರೂಪಿಸುವುದು ನಮ್ಮ ಕನಸಾಗಿರಬೇಕು ಎಂದು ಹೇಳಿದ್ದಾರೆ.

ಗಾಂಧಿ-ಸಾರ್ವಕರ್ ಒಬ್ಬರನೊಬ್ಬರು ಗೌರವಿಸುತ್ತಿದ್ದರು

ಭಾರತದ ಮೇಲೆ ದಾಳಿ ಮಾಡಿದ ಮತ್ತು ನಮ್ಮ ನಾಗರೀಕತೆಗೆ ವಿರುದ್ದವಾಗಿದ್ದ ಮುಸ್ಲಿಂ ರಾಜರ ಹೆಸರನ್ನು ನಮ್ಮ ದೇಶದ ರಸ್ತೆಗಳಿಗೆ ಇಡಬಾರದು. ಅಕ್ಬರ್ ಒಳ್ಳೆಯ ರಾಜ ಆದರೆ, ಔರಂಗಜೇಬ್ ಅಲ್ಲ. ದಾರಾ ಶಿಕೋಹ್‌ನಿಂದ ಅಶ್ಫಾಖುಲ್ಲಾ ಖಾನ್ (ಸ್ವಾತಂತ್ರ್ಯ ಹೋರಾಟಗಾರ) ವರೆಗೆ ಅನೇಕ ಜನರಿದ್ದಾರೆ ಅವರ ಹೆಸರುಗಳನ್ನು ಇಡಿ ಎಂದು ಭಾಗವತ್ ಹೇಳಿದ್ದಾರೆ.

ಯಾರನ್ನೋ ಓಲೈಸುವುದು ನಮ್ಮ ಮಂತ್ರವಾಗಿರಬಾರದು ಇದನ್ನೇ ಸಾರ್ವಕರ್ ಕೂಡ ಪ್ರಚಾರ ಮಾಡಿದ್ದು ಎಂದು ಹೇಳಿದ್ದಾರೆ. ಗಾಂಧಿ ಮತ್ತು ಸಾರ್ವಕರ್ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತಿದ್ದರು ಎಂದು ಭಾಗವತ್ ಹೇಳಿದ್ದಾರೆ.

ಇಬ್ಬರು ತಮ್ಮ ತಮ್ಮ ಭಾವನೆಗಳನ್ನು ಗೌರವಿಸಿದರು ಮತ್ತು ಹಲವರು ಇಬ್ಬರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಯತ್ನಿಸಿದರು ಎಂದು ಹೇಳಿದ್ದಾರೆ.

ಸಾರ್ವಕರ್‌ರನ್ನು ಅವಹೇಳನ ಮಾಡಲು ಮಾರ್ಕ್ಸ್ವಾದಿ ಇತಿಹಾಸಕಾರರು ಪ್ರಯತ್ನಿಸಿದರು ಎಂದು ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ಕೆಲವರು ಅವರನ್ನು ಪ್ಯಾಸಿಸ್ಟ್, ನಾಜಿ ಎಂದು ಕರೆಯುತ್ತಾರೆ. ಆದರೆ, ಅವರು ಒಬ್ಬ ಮಹಾನ್ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀಜಿಯವರ ಸೂಚನೆ ಮೇರೆಗೆ ಅವರು ಕ್ಷಮಾಧಾನ ಅರ್ಜಿಯನ್ನು ಸಲ್ಲಿಸಿದ್ದರು, ಇದು ಪ್ರತಿಯೊಬ್ಬ ಕೈದಿಯ ಹಕ್ಕಾಗಿತ್ತು. ಆದರೆ, ಅವರ ಮಾನಹಾನಿ ಮಾಡಲು ವಿರೋಧ ಪಕ್ಷಗಳು ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಸಾರ್ವಕರ್ ಕ್ಷಮಾಧಾನ ಅರ್ಜಿಯ ಬಗ್ಗೆ ವಿರೋಧ ಪಕ್ಷಗಳ ಹೇಳಿಕೆ ಕುರಿತು ಹೇಳಿದ್ದಾರೆ.

ಅವರು ಭಾರತದ ಅತ್ಯುತ್ತಮ ಭದ್ರತಾ ಸಲಹೆಗಾರರಲ್ಲಿ ಒಬ್ಬರಾಗಿದ್ದರು. ಅವರು ಮುಂದಿನ ದಿನಗಳಲ್ಲಿ ಭಾರತ ಎದುರಿಸಲು ಹೊರಟಿರುವ ಅನೇಕ ಸವಾಲುಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದರು. ಅದು ನಿಜವಾಯಿತ್ತು ಆದರೆ, ಸಾರ್ವಕರ್ ಬಗ್ಗೆ ವಿರೋಧ ಪಕ್ಷಗಳ ಹೇಳಿಕೆ ಎಂದು ಕ್ಷಮಿಸಲಾಗದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

Tags: BJPCongress PartyCovid 19ʻಭಾಯಿಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಗಾಂಧಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಮೋಹನ್ ಭಾಗವತ್ರಾಕನಾಥ ಸಿಂಗ್ಸಾರ್ವಕರ್ಸಿದ್ದರಾಮಯ್ಯಹಿಂದು ಮುಸ್ಲಿಂ
Previous Post

ಏರ್ ಇಂಡಿಯಾ ಸಂಸ್ಥಾಪಕರಾದ ಜೆ.ಆರ್.ಡಿ. ಟಾಟಾ ಅವರನ್ನು ಹೇಗೆ ನೆಹರು ಮತ್ತು ಇಂದಿರಾ ಗಾಂಧಿ ಮೌನವಾಗಿ ಇರಿಸಿಕೊಂಡಿದ್ದರು

Next Post

ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನದಲ್ಲಿ ಮುಳಗುಂದ ಪಟ್ಟಣ ಪಂಚಾಯತಿ ರಾಜ್ಯಕ್ಕೆ ಪ್ರಥಮ!

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನದಲ್ಲಿ ಮುಳಗುಂದ ಪಟ್ಟಣ ಪಂಚಾಯತಿ ರಾಜ್ಯಕ್ಕೆ ಪ್ರಥಮ!

ಕೆರೆಗಳ ಸಂರಕ್ಷಣೆ ಹಾಗೂ ಪುನಶ್ಚೇತನದಲ್ಲಿ ಮುಳಗುಂದ ಪಟ್ಟಣ ಪಂಚಾಯತಿ ರಾಜ್ಯಕ್ಕೆ ಪ್ರಥಮ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada