ಈಗಾಗಲೇ ಈ ಬಾರಿಯ ಚಳಿಗೆ ಬೆಂಗಳೂರಿಗರು (Bengaluru) ನಡುಗುವಂತಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಚ್ಲಿಯ ಪ್ರಮಾಣ ಹೆಚ್ಚಳವಾಗಿದೆ. ಆದ್ರೆ ಈ ಗ ಚಳಿಯ ಜೊತೆಗೆ ಮಳೆಯೂ ಶುರುವಾಗಿದೆ. ಇಂದು (ಜ.19) ಬೆಳ್ಳಂ ಬೆಳಿಗ್ಗೆಯಿಂದ ಬೆಂಗಳೂರಲ್ಲಿ ಮಳೆ ಆರಂಭವಾಗಿದೆ.
ಬಂಗಾಳ ಕೊಲ್ಲಿಯಲ್ಲಿ (Bay of bengal) ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ತಟ್ಟಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ನಗರದ ವಿವಿಧ ಭಾಗಗಳಲ್ಲಿ ಮಳೆ ಶುರುವಾಗಿದೆ. ಹೆಬ್ಬಾಳ(Hebbal), ಏರ್ಪೋರ್ಟ್ ರೋಡ್ (Airpoet road) ಜಯನಗರ (Jayanagar) ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡುಮಾರುತ ಸೃಷ್ಟಿಯಾಗಿದ್ದು, ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಮೇಲೆ ಈ ಚಂಡಮಾರುತದ ಎಫೆಕ್ಟ್ ಇರಲಿದೆ. ಹೀಗಾಗಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲೂ ಕೂಡ ಅಕಾಲಿಕ ಮಳೆಯಾಗ್ತಿದೆ, ಜೊತೆಗೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.