
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ನಡೆದ ’ಹೂಡಿಕೆದಾರರೊಂದಿಗೆ ವಿಶೇಷ ಸಂವಾದಾತ್ಮಕ ಸಭೆಯಲ್ಲಿ ದೇಶದ 50ಕ್ಕೂ ಹೆಚ್ಚು ವಿಸಿ-ವೆಂಚರ್ ಕ್ಯಾಪ್ಟಿಲಿಸ್ಟ್ಸ್ ಸಾಹಸೋದ್ಯಮ ಬಂಡವಾಳಗಾರರೊಂದಿಗೆಸಂವಾದ ನಡೆಸಿದರು.
ಬೆಂಗಳೂರು ಟೆಕ್ ಶೃಂಗಸಭೆ 2025 ರ ಮುಂಬರುವ 28 ನೇ ಆವೃತ್ತಿಯ ಸಂದರ್ಭದಲ್ಲಿ ನಡೆಯಲಿರುವ ಫ್ಯೂಚರ್ ಮೇಕರ್ಸ್ ಸಮ್ಮೇಳನಕ್ಕೆ ಮುಂಚಿತವಾಗಿ ವಿ.ಸಿಗಳೊಂದಿಗೆ ಪೂರ್ವಭಾವಿ ಸಂವಾದ ನಡೆಸಿ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಹೂಡಿಕೆದಾರರ ಪಾತ್ರ ಹಾಗೂ ರಾಜ್ಯದ ವಿಶೇಷ ಸ್ಥಾನಮಾನವನ್ನು ಸಚಿವರು ಶ್ಲಾಘಿಸಿದರು. ‘ತಂತ್ರಜ್ಞಾನ, ನಾವೀನ್ಯತೆ ಮತ್ತು ಹೂಡಿಕೆಯ ಮುಂದಿನ ಬೆಳವಣಿಗೆಗಳನ್ನು ಮುನ್ನಡೆಸಲು ಕರ್ನಾಟಕ ವಿಶಿಷ್ಟ ಸ್ಥಾನದಲ್ಲಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸುವಿಕೆ, ಉಪಸ್ಥಿತಿ ಮತ್ತು ಮಾರ್ಗದರ್ಶನವು ಎಐ ಮತ್ತು ಡೀಪ್ಟೆಕ್ ನಾವಿನ್ಯತೆಯಲ್ಲಿ ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಸ್ಪಷ್ಟವಾದ ಭವಿಷ್ಯವನ್ನು ನಿರ್ಮಾಣ ಮಾಡಲಿದೆ ಎಂದು ಸಚಿವರು ಹೇಳಿದರು.

ನವೆಂಬರ್ 20, 2025 ರಂದು ನಡೆಯಲಿರುವ ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್, ಉದಯೋನ್ಮುಖ ಉದ್ಯಮಿಗಳು, ಆರಂಭಿಕ ಹಂತದ ಸಂಸ್ಥಾಪಕರು, ಅನುಭವಿ ಉದ್ಯಮಿಗಳು – ಹೆಚ್ಚು ಸ್ಪಷ್ಟವಾದ ಮತ್ತು ನಿರ್ದಿಷ್ಟ ಮೌಲ್ಯವನ್ನು ತಲುಪಿಸುವ ಗುರಿಯನ್ನು ಹೊಂದಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯ ಎಲ್ಲಾ ಭಾಗೀದಾರರಿಗೆ ಪ್ರಮುಖ ಸಮ್ಮೇಳನವಾಗಿದೆ. ಇದು ಸಂಸ್ಥಾಪಕರು, ಹೂಡಿಕೆದಾರರು ಮತ್ತು ನಾವೀನ್ಯಕಾರರನ್ನು ಒಳಗೊಂಡ ಉನ್ನತ-ಶಕ್ತಿಯ ಸಭೆಯಾಗಲಿದೆ. ಅವರಲ್ಲಿ ಸುಮಾರು 1೦,೦೦೦ ಜನರು, ಅವರು ಉದ್ಯಮಶೀಲತೆಯ ಮುಂದಿನ ಅಲೆಯನ್ನು ರೂಪಿಸುತ್ತಾರೆ ಎಂದು ಹೇಳಿದರು.
ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ಅನ್ನು ಎಐ/ಡೀಪ್ಟೆಕ್ ಸ್ಟಾರ್ಟ್-ಅಪ್ಗಳಲ್ಲಿ ಹೊಸ ಹೂಡಿಕೆ ಬದ್ಧತೆಗಳನ್ನು ಘೋಷಿಸಲು ವೇದಿಕೆಯಾಗಿ ಬಳಸುವಂತೆ ವಿಸಿಗಳು ಮತ್ತು ಹೂಡಿಕೆದಾರರನ್ನು ಆಹ್ವಾನಿಸಿದರು. ಇಂತಹ ಉಪಕ್ರಮಗಳು ಭಾರತದ ನಾವೀನ್ಯತೆ ಸಾಮರ್ಥ್ಯದಲ್ಲಿ ಸಾಮೂಹಿಕ ವಿಶ್ವಾಸವನ್ನು ಪ್ರದರ್ಶಿಸುವುದಲ್ಲದೆ, ಬೆಂಗಳೂರಿನಿಂದ ವಿಶ್ವ ದರ್ಜೆಯ ಪರಿಹಾರಗಳನ್ನು ಜಗತ್ತಿಗೆ ನಿರ್ಮಿಸಲು ಹೊಸ ಪೀಳಿಗೆಯ ಉದ್ಯಮಿಗಳಿಗೆ ಸ್ಫೂರ್ತಿ ನೀಡುತ್ತವೆ ಎಂದು ತಿಳಿಸಿದರು.

ಫ್ಯೂಚರ್ ಮೇಕರ್ಸ್ ಕಾನ್ಕ್ಲೇವ್ ಮತ್ತು ಬಿಟಿಎಸ್ 2025 ಕೇವಲ ತಂತ್ರಜ್ಞಾನ ಪ್ರದರ್ಶನವಲ್ಲ, ಬದಲಾಗಿ ನಾವೀನ್ಯತೆ ಮಾರುಕಟ್ಟೆಯಾಗಿದ್ದು, ಬಂಡವಾಳ ಪ್ರವೇಶ, ಪ್ರಾಯೋಗಿಕ ಯೋಜನೆಗಳು, ವ್ಯಾಪಾರ ಪರಿಕರಗಳು, ಮಾರ್ಗದರ್ಶನ, ಗೋಚರತೆ ಅಥವಾ ನೆಟ್ವರ್ಕ್ಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಲು ಅನುವು ಮಾಡುತ್ತದೆ ಎಂದರು.

ಜಾಗತಿಕ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯ ಶ್ರೇಯಾಂಕದಲ್ಲಿ ಬೆಂಗಳೂರು ಏಳನೇ ಸ್ಥಾನಕ್ಕೇರಿದೆ.3600 ಕ್ಕೂ ಹೆಚ್ಚು ಡೀಪ್ಟೆಕ್ ನವೋದ್ಯಮಗಳನ್ನು ಪೋಷಿಸುವ ಡೀಪ್ಟೆಕ್ ಪರಿಸರ ವ್ಯವಸ್ಥೆಗಳಲ್ಲಿ ಭಾರತ ಜಾಗತಿಕವಾಗಿ ಆರನೇ ಸ್ಥಾನದಲ್ಲಿದೆ ಮತ್ತು ಈ ಹೆಚ್ಚಿನ ಸ್ಟಾರ್ಟ್-ಅಪ್ಗಳು ಕರ್ನಾಟಕದಲ್ಲಿವೆ. 2020-24 ರ ಅವಧಿಯಲ್ಲಿ, ಬೆಂಗಳೂರಿನ ನವೋದ್ಯಮಗಳು ಬಲವಾದ ಹೂಡಿಕೆದಾರರ ವಿಶ್ವಾಸವನ್ನು ಸೂಚಿಸುವ 38 ಡಾಲರ್ ಬಿಲಿಯನ್ ಮೌಲ್ಯದ ನಿಧಿಗಳನ್ನು ಆಕರ್ಷಿಸಿವೆ. ಮತ್ತು ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ, ಕರ್ನಾಟಕ ಮೂಲದ ಸ್ಟಾರ್ಟ್-ಅಪ್ಗಳು 2025 ರ ಮೊದಲಾರ್ಧದಲ್ಲಿ 1.7 ಬಿಲಿಯನ್ ಹಣವನ್ನು ಸಂಗ್ರಹಿಸಿವೆ. ಇದು ಯಾವುದೇ ರಾಜ್ಯದಿಂದ ಪಡೆದ ಅತ್ಯಧಿಕವಾಗಿದೆ. ಇದು ನಮ್ಮ ಉದ್ಯಮಿಗಳು, ಹೂಡಿಕೆದಾರರು ಮತ್ತು ಸರ್ಕಾರದ ಸಾಮೂಹಿಕ ಪ್ರಯತ್ನದ ಫಲಿತಾಂಶವಾಗಿದೆ ಎಂದು ಸಚಿವರು ಹೇಳಿದರು.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು ಸಂವಾದಾತ್ಮಕ ಅಧಿವೇಶನದಲ್ಲಿ ಉಪಸ್ಥಿತರಿದ್ದರು. ಸಂವಾದಾತ್ಮಕ ಅಧಿವೇಶನದಲ್ಲಿ ಆಕ್ಸೆಲ್ ಇಂಡಿಯಾದ ಸ್ಥಾಪಕ ಪಾಲುದಾರ ಮತ್ತು ಕರ್ನಾಟಕದ ವಿಷನ್ ಗ್ರೂಪ್ ಆ್ ಸ್ಟಾರ್ಟ್-ಅಪ್ಗಳ ಅಧ್ಯಕ್ಷ ಡಾ. ಪ್ರಶಾಂತ್ ಪ್ರಕಾಶ್ ಭಾಗವಹಿಸಿದ್ದರು.