ಇಂದು ನಾಡಿನೆಲ್ಲೆಡೆ ಶಿವರಾತ್ರಿ (Shivarathri) ಹಬ್ಬದ ಸಂಭ್ರಮ ಜೋರಾಗಿದೆ. ಸಿಲಿಕಾನ್ ಸಿಟಿ (Benagluru) ಮಂದಿ ಶಿವರಾತ್ರಿಯನ್ನ ಅದ್ದೂರಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ.ಹೀಗಾಗಿ ನಗರದ ಶಿವನ ದೇವಸ್ಥಾನಗಳಲ್ಲಿ ಬೆಳ್ಳಗ್ಗೆಯಿಂದಲೇ ವಿಶೇಷ ಪೂಜೆ ಆರಂಭವಾಗಿದೆ.

ಇಂದು ನಗರದ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು,ಬೆಳಗಿನ ಜಾವ 4 ಗಂಟೆಯಿಂದಲೇ ಪೂಜೆ ಆರಂಭವಾಗಿದೆ. ರುದ್ರಾಭಿಷೇಕದ ಮೂಲಕ ಪೂಜೆ ಆರಂಭವಾಗಿದೆ.ಮಲ್ಲಿಕಾರ್ಜುನನಿಗೆ ಇಂದು ಪಂಚಾಮೃತಾಭಿಷೇಕ , ಕ್ಷೀರಾಭಿಷೇಕ,ರುದ್ರ ಪಾರಾಯಣ ಮಹಾಮಂಗಳಾರತಿ ನೇರವೇರಿಸಲಾಗಿದೆ.
ಬೆಳಿಗ್ಗೆ 4 ಗಂಟೆಯಿಂದ 5.30 ರವರೆಗೆ ಸೇವಾ ಚೀಟಿ ಪಡೆದಿರುವ 1500 ಕುಟುಂಬಗಳು ಪೂಜೆಯಲ್ಲಿ ಭಾಗಿಯಾಗಿದ್ರು.ಬೆಳ್ಳಗ್ಗೆ 5:30 ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು,3500 ಕೆ.ಜಿ.ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ.2 ಸಾವಿರ ಮುಸುಕಿನ ಜೋಳ ಇಪ್ಪತ್ತುವರೆ ಕಬ್ಬು ಹಾಗೂ 1500 ಎಳನೀರಿನಿಂದ ದೇವಸ್ಥಾನ ಅಲಂಕಾರ ಮಾಡಲಾಗಿದೆ.