
ರೀಲ್ಸ್‌ನಲ್ಲಿ ನಮ್ಮ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಹಾಸ್ಯ ಮಾಡಿದ್ದ ಉತ್ತರ ಭಾರತದ ಮಹಿಳೆಗೆ ತಕ್ಕ ಶಾಸ್ತಿಯಾಗಿದೆ. ಇಲ್ಲೇ ಇದ್ದು ಈ ನೆಲದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಈಗ ಆಕೆಯ ಉದ್ಯೋಗಕ್ಕೆ ಕುತ್ತು ಬಂದಿದೆ. ಇತ್ತೀಚೆಗೆ ರೀಲ್ಸ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸುಗಂಧ್ ಶರ್ಮಾ ಎಂಬ ಮಹಿಳೆಯನ್ನು ಸದ್ಯ ಉದ್ಯೋಗದಿಂದ ಕಿತ್ತು ಹಾಕಲಾಗಿದೆ.
💪🏻💪🏻💪🏻
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) September 23, 2024
ಕಡೆಗೂ ಕನ್ನಡಿಗರ ಕ್ಷಮೆ ಕೇಳಿಸಿದ್ದೇವೆ.
ಯಾರೇ ಆಗಲಿ ಕನ್ನಡ,ಕನ್ನಡಿಗರ ತಂಟೆಗೆ ಬಂದ್ರೆ ಇಷ್ಟೇ..
ನಮ್ಮ ವಿರುದ್ಧ ಗೆಲ್ಲೋದು ಅಷ್ಟು ಸುಲಭವಲ್ಲ
ಕನ್ನಡಿಗರಿಗೆ ಜಯವಾಗಲಿ… 💛❤️💪🏻
ಇಷ್ಟಕ್ಕೆ ಮುಗಿದಿಲ್ಲ ಪೊಲೀಸ್ ಠಾಣೆಗೆ ಬಂದು ಲಿಖಿತ ಹೇಳಿಕೆ ಕೊಡುವವರೆಗೂ ನಮ್ಮ ಹೋರಾಟ ಇರುತ್ತದೆ…
ಜೈ ಕರ್ನಾಟಕ 💛❤️ pic.twitter.com/ZjuvmZ5Tgw
ಉತ್ತರ ಭಾರತದ ಸುಗಂಧ್ ಶರ್ಮಾ ಎನ್ನುವ ಮಹಿಳೆ ಮಾಡಿದ್ದ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ರೀಲ್ಸ್‌ನಲ್ಲಿ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ ಮಹಿಳೆ, ʼನಾವು ಉತ್ತರ ಭಾರತೀಯರೇ ಇಲ್ಲ ಅಂದ್ರೆ.. ಇಡೀ ಬೆಂಗಳೂರು ಖಾಲಿ ಖಾಲಿ ಹೊಡೆಯುತ್ತೆ.. ಇಲ್ಲಿರುವ ಪಿ.ಜಿಗಳೆಲ್ಲ ಭಣಗುಡುತ್ತವೆ. ಇನ್ನು ಕೋರಮಂಗಲದ ಪಬ್‌ಗಳೆಲ್ಲವೂ ಬಿಕೋ ಎನ್ನುತ್ತವೆ. ಹಾಗಾಗಿ, ನಮ್ಮ ಬಗ್ಗೆ ಮಾತನಾಡುವಾಗ ಹುಷಾರ್! ಎಂದು ರೀಲ್ಸ್‌ನಲ್ಲಿ ಮಹಿಳೆ ಕೊಬ್ಬಿನಿಂದ ಮಾತನಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಯುವತಿಯ ವಿಡಿಯೋಗೆ ಸ್ಯಾಂಡಲ್‌ವುಡ್‌ನ ಕೆಲವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಗ್‌ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಕೂಡ ಪ್ಲೀಸ್ ಇಲ್ಲಿಂದ ಹೊರಡಿ ಎಂದು ಈ ರೀಲ್ಸ್‌ಗೆ ಕಾಮೆಂಟ್ ಮಾಡಿದ್ದರು. ನಟಿ ಚೈತ್ರಾ ಆಚಾರ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ನೀವು ಹೇಳಿದಂತೆ ನಾವು ನಿಮ್ಮಂತವರು ಇಲ್ಲದ ಖಾಲಿ ಬೆಂಗಳೂರನ್ನು ನೋಡಲು ಇಚ್ಛಿಸುತ್ತೇವೆ. ನಾವು ಹಾಗೆಯೇ ಜೀವನ ನಡೆಸಲು ಇಷ್ಟ ಪಡುತ್ತೇವೆ. ಬೇರೆಯವರ ಬಗ್ಗೆ ನಾನು ಮಾತನಾಡುತ್ತಿಲ್ಲ, ಮೊದಲು ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಸಿಡದಿದ್ದರು.
— N Vijay (@NVijayAradhya16) September 23, 2024
ಕನ್ನಡತಿ, ಟಾಲಿವುಡ್ ನಟಿ ವರ್ಷ ಬೊಲ್ಲಮ್ಮ ಕೂಡ, ಆದಷ್ಟು ಬೇಗನೇ ಅಲ್ಲಿಂದ ಹೊರಡಿ, ನೀವು ಹೇಳಿದ್ದು ಆದ್ರೆ ತುಂಬಾ ಚೆನ್ನಾಗಿರುತ್ತೆ! ಎಂದು ಕಾಮೆಂಟ್‌ನಲ್ಲಿ ಆಕೆಯ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಕಿರುತೆರೆ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರೀಲ್ಸ್ ಮಾಡಿ ಅದರಲ್ಲಿ ʼಐ ಲವ್ ಬೆಂಗಳೂರುʼ ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದರು. ಇನ್ನೊಂದು ರೀಲ್ಸ್‌ನಲ್ಲಿ ಆಕೆ, ನಾನು ಕಾಮಿಡಿಗಾಗಿ ಮಾಡಿದ ರೀಲ್ಸ್ ನೋಡಿ ಹಲವರು ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. “ನಾನು ಬೆಂಗಳೂರನ್ನೇ ಪ್ರೀತಿಸುತ್ತೇನೆ” ಎಂದು ಕನ್ನಡದಲ್ಲೇ ಮಾತನಾಡಿ, ನಾನೊಬ್ಬ ಟ್ರಾವೆಲರ್, ಎಲ್ಲ ಊರಿನ ಸಂಸ್ಕೃತಿ ನನಗೆ ಇಷ್ಟ. ಎಲ್ಲ ಊರನ್ನೂ ನಾನು ಗೌರವಿಸುತ್ತೇನೆ. ನಾವು ಒಡೆದು ಆಳುವುದು ಬೇಡ. ನಾವೆಲ್ಲ ಒಂದು, ಇದು ಇಂಡಿಯಾ, ನಾನು ಭಾರತೀಯಳು ಎಂದೆಲ್ಲ ಭಾಷಣ ಬಿಗಿದಿದ್ದರು.
 
			 
                                 
                                