ಮಗು ಹುಟ್ಟಿ ಒಂದಿಷ್ಟು ದಿನಗಳ ನಂತರ ಮಗುವಿಗೆ ಸ್ನಾನ ಮಾಡಿಸುವ ಮುನ್ನ ಇಡೀ ದೇಹಕ್ಕೆ ಎಣ್ಣೆಯನ್ನು ಹಚ್ಚಿ ಕೆಲ ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಹಾಗೆ ಬಿಟ್ಟು,ನಂತರ ಬಿಸಿ ನೀರಿನಲ್ಲಿ ಸ್ನಾನವನ್ನು ಮಾಡಿಸುತ್ತಾರೆ,ಇದು ದಶಕಗಳಿಂದಲೂ ಬಂದಿರುವ ಒಂದು ಸಾಂಪ್ರದಾಯಿಕ ಪದ್ಧತಿ.ಇನ್ನು ಸ್ನಾನ ಮಾಡಿಸುವಾಗ ಹೆಚ್ಚು ಜನ ಸೋಪ್ ಬದಲು ಕಡಲೆ ಹಿಟ್ಟನ್ನು ಬಳಸುತ್ತಾರೆ..ಕಡಲೆ ಹಿಟ್ಟು ಎಣ್ಣೆಯನ್ನು ತೆಗೆಯುವುದು ಮಾತ್ರವಲ್ಲದೆ ಚರ್ಮಕ್ಕು ಕೂಡ ತುಂಬಾನೆ ಒಳ್ಳೆಯದು..ಆ ಬಗ್ಗೆ ಇಲ್ಲಿದೆ ಮಾಹಿತಿ..

ಚರ್ಮಕ್ಕೆ ಉತ್ತಮ
ಕಡಲೆ ಹಿಟ್ಟು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೇ ಹಾಗು ಚರ್ಮದಲ್ಲಿ ಉಂಟಾಗುವ ಕಿರಿಕಿರಿ ಮತ್ತು ಕೆಂಪು ಬಣ್ಣದ ಗುಳ್ಳೆಗಳನ್ನು ಕಡಿಮೆ ಮಾಡುತ್ತದೆ.

ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ
ಕಡಲೆ ಹಿಟ್ಟು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ, ಜಿಡ್ಡನ್ನು ತಡೆಯಲು ಮತ್ತು ಚರ್ಮವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.ಹಾಗಾಗಿ ಎಣ್ಣೆ ಸ್ನಾನ ಮಾಡಿಸಿದಾಗ ಕಡಲೆ ಹಿಟ್ಟು ಬಳಸುವುದು ಉತ್ತಮ.

ಡೆಡ್ ಸ್ಕಿನ್ ನ ತೆಗೆದು ಹಾಕುತ್ತದೆ
ಕಡಲೆ ಹಿಟ್ಟಿನ ಒಂದಿಷ್ಟು ಅಂಶವು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಮೃದುಗೊಳಿಸುತ್ತದೆ .ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಚರ್ಮ ಡ್ರೈ ಆಗುವುದನ್ನು ತಡೆಗಟ್ಟುತ್ತದೆ
ಕಡಲೆ ಹಿಟ್ಟು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಮತ್ತು ಚರ್ಮವನ್ನು ಶುಷ್ಕತೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಇದು ಎಸ್ಜಿಮಾದಂತಹ ಒಣ ಚರ್ಮದ ಸ್ಥಿತಿಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.