ಗರ್ಭಾವಸ್ಥೆಯಲ್ಲಿ ತಿಂಗಳು ಕಳೆದಂತೆ ಒಂದೊಂದು ಸಮಸ್ಯೆಗಳು ಎದುರಾಗುತ್ತದೆ.ವಾಂತಿ,ವಾಕರಿಕೆ,ಬೆನ್ನು ಹಾಗೂ ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ..ಇದರ ಜೊತೆಗೆ ಹೆಚ್ಚು ಮಹಿಳೆಯರಿಗೆ ರಾತ್ರಿ ವೇಳೆ ನಿದ್ದೆ ಸರಿಯಾಗಿ ಆಗುವುದಿಲ್ಲ..ಈ ಕಾರಣದಿಂದಾಗಿ ತಾವು ಮಲಗುವ ಭಂಗಿಯನ್ನು ಬದಲಿಸುತ್ತಿರುತ್ತಾರೆ..ಇನ್ನು ಎಡ ಭಾಗಕ್ಕೆ ತಿರುಗಿ ಮಲಗುವುದರಿಂದ ಒಂದಿಷ್ಟು ಪ್ರಯೋಜನಗಳಿವೆ.
- ನಿಮ್ಮ ಎಡ ಭಾಗಕ್ಕೆ ಮಲಗುವುದರಿಂದ ಬ್ಲಡ್ ಫ್ಲೋ ಇಂಪ್ರೂ ಆಗುತ್ತದೆ. ಮುಖ್ಯವಾಗಿ ಮಗುವಿಗೆ ಆಕ್ಸಿಜನ್ ಸಿಗುತ್ತದೆ ಹಾಗೂ ನ್ಯೂಟ್ರಿಷನ್ ಹೆಚ್ಚಾಗುತ್ತದೆ.
- ಯಕೃತ್ತು ದೇಹದ ಬಲಭಾಗದಲ್ಲಿದೆ ಮತ್ತು ನಿಮ್ಮ ಎಡಭಾಗದಲ್ಲಿ ಮಲಗುವುದು ಈ ಪ್ರಮುಖ ಅಂಗದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಎಡಭಾಗದಲ್ಲಿ ಮಲಗುವುದು ಉತ್ತಮ ಕಾರಣ ಕಿಡ್ನಿ ಫಂಕ್ಷನ್ ಅನ್ನ ಹೆಚ್ಚು ಮಾಡುತ್ತದೆ ಹಾಗೂ ದೇಹದಲ್ಲಿರುವ ಬೇಡಿದ ಅಂಶಗಳನ್ನು ತೆಗೆದು ಹಾಕುವಲ್ಲಿ ಸಹಾಯಕಾರಿಯಾಗುತ್ತದೆ.
- ಹೀಗೆ ಮಲಗುವುದರಿಂದ ಬೆನ್ನು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಕಾರಣ ಸ್ಪೈನಲ್ ಕಾರ್ಡ್ ಮೇಲೆ ಒತ್ತಡ ಬೀಳುವುದಿಲ್ಲ.
- ಗರ್ಭಾವಸ್ಥೆಯಲ್ಲಿ ಡೈಜೆಶನ್ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುತ್ತದೆ, ಎಡಬದಿಯಲ್ಲಿ ಮಲಗುವುದರಿಂದ ಜೀವನಕ್ರಿಯೆಗೆ ಸಹಾಯಕಾರಿ.
- ಇದೆಲ್ಲದರ ಜೊತೆಗೆ ಮಗುವಿನ ಮೊಮೆಂಟ್ಸ್ ಗೆ ಸಹಾಯಕಾರಿ ಹಾಗೂ ಬೆಳವಣಿಗೆಗೂ ಒಳ್ಳೆಯದು